ಶಿವಮೊಗ್ಗ : ಹಾಡಹಗಲೇ ಕರ್ತವ್ಯ ನಿರತ ಮಹಿಳಾ ASI ಮಾಂಗಲ್ಯ ಸರವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಯಿಂದ ಶಿವಮೊಗ್ಗ ಜನತೆ ಬೆಚ್ಚಿ ಬಿದ್ದಿದ್ದಾರೆ.
ASI ಅಮೃತಾಬಾಯಿ ಕತ್ತಿನಲ್ಲಿದ್ದ 60 ಗ್ರಾಂ ಮಾಂಗಲ್ಯಸರ ಕಳವು ಮಾಡಲಾಗಿದೆ. ಶಿವಮೊಗ್ಗ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕುತ್ತಿದ್ದರು. ಈ ವೇಳೆ ಬಂದೋ ಬಸ್ತ್ ಗೆ ASI ಅಮೃತಾಬಾಯಿ ನಿಯೋಜನೆ ಮಾಡಲಾಗಿತ್ತು. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಪೊಲೀಸ್ ಅಧಿಕಾರಿ ಎನ್ನುವ ಭಯವೇ ಇಲ್ಲವಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








