ಉತ್ತರಪ್ರದೇಶ : ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿ ಕಾರು ಓಡಿಸಿ 6 ಜನರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ ಪೊಲೀಸರು ಪ್ರಮುಖ ತಂಬಾಕು ಉದ್ಯಮಿಯ ಪುತ್ರ 26 ವರ್ಷದ ಶಿವಂ ಮಿಶ್ರಾ ಅವರನ್ನು ಬಂಧಿಸಿದ್ದರು.
ಇದೀಗ ಕಾನ್ಪುರದ ACMM ಕೋರ್ಟ್ ನಿಂದ ಜಾಮೀನು ಮಂಜೂರು ಸಿಕ್ಕಿದೆ. ಉತ್ತರ ಪ್ರದೇಶದ ಖ್ಯಾತ ತಂಬಾಕು ಉದ್ಯಮಿ ಕೆಕೆ ಮಿಶ್ರಾ ಪುತ್ರ ಶಿವಂ ಮಿಶ್ರಾನನ್ನ ಕಾನ್ಪುರ ಪೋಲಿಸರು ಬೆಳಿಗ್ಗೆಯಷ್ಟೇ ಬಂಧಿಸಿದ್ದರು. ಕುಡಿದ ಮತ್ತಿನಲ್ಲಿ ಲ್ಯಾಂಬೋರ್ಗಿನಿ ಕಾರು ಓಡಿಸಿದ್ದ. ಈ ವೇಳೆ ಕಾರು ಡಿಕ್ಕಿಯಾಗಿ ಆರು ಪಾದಚಾರಿಗಳು ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿದ್ದರು. ಇದೀಗ ಕಾನ್ಪುರ ಕೋರ್ಟ್ ಶಿವು ಮಿಶ್ರಾಗೆ ಜಾಮೀನು ಮಂಜೂರು ಮಾಡಿದೆ.








