ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬಳಸುವ ಸರ್ಕಾರಿ ಕಾರಿನ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲೆ 2000 ರು. ದಂಡ ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಎಕ್ಸ್ ತಾಣದಲ್ಲಿ ‘ಆರ್‌ಸಿ ಬೆಂಗಳೂರು’ ಹೆಸರಿನ ಖಾತೆಯಲ್ಲಿ ಮುಖ್ಯಮಂತ್ರಿ ಕಾರಿನ ಫೋಟೋ ಪೋಸ್ಟ್ ಹಾಕಲಾಗಿದೆ.
ಸಿಎಂ ಸರ್ಕಾರಿ ಕಾರು ಕೆಎ-05, ಜಿಎ- 2023 ಕಾರಿನ ಮೇಲೆ ನಿಯಮ ಉಲ್ಲಂಘನೆ ಸಂಬಂಧ 7 ಕೇಸ್ ಬಾಕಿ ಇದ್ದು, 2000 ರು. ದಂಡ ಪಾವತಿಸ ಬೇಕಿದೆ ಎಂದು ಬರೆಯಲಾಗಿತ್ತು ಈ ಪೈಕಿ 6 ಸಲ ಸೀಟ್ ಬೆಲ್ಟ್ ಧರಿಸದೆ, ಒಮ್ಮೆ ವೇಗವಾಗಿ ಚಾಲನೆಗೆ ದಂಡ ಬಿದ್ದಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾರಿನ ಮೇಲೆ ಹಾಕಲಾಗಿರುವ ದಂಡ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.