ನವದೆಹಲಿ: ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ನಡುವೆ ಅವರು ಏಷ್ಯಾ ಕಪ್ ಗಾಗಿ ಇಂದು ದುಬೈನಲ್ಲಿ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎನ್ನಲಾಗಿದೆ. ಇನ್ನೂ ದ್ರಾವಿಡ್ ಅವರಿಗೆ ಕೋವಿಡ್ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದು, ಸದ್ಯ ಅವರಿಗೆ ಅದು ಕಡಿಮೆಯಾಗಿದೆ. ಅವರಿಗೆ ಮತ್ತೆ ಎರಡು ದಿನಗಳಲ್ಲಿ ಮತ್ತೆ ಪರೀಕ್ಷೆ ನಡೆಸಲಿದ್ದಾರೆ. ಅಲ್ಲಿಯವರೆಗೆ ಬೌಲಿಂಗ್ ಕೋಚ್ ಪಾರಸ್ ಮಂಬ್ರೆ ಅವರು ಟೀಮ್ ಇಂಡಿಯಾಕ್ಕೆ ಮಾರ್ಗದರ್ಶನ ನೀಡಲಿದ್ದಾರೆ ಅಂತ ತಿಳಿದು ಬಂದಿದೆ.
ದ್ರಾವಿಡ್ ಕೋವಿಡ್ ಇರುವ ಕಾರಣಕ್ಕೆ, ಈ ಹಿಂಧೆ ಜಿಂಬಾಬ್ವೆಯಲ್ಲಿ ಭಾರತದ ತರಬೇತುದಾರರಾಗಿದ್ದ ವಿವಿಎಸ್ ಲಕ್ಷ್ಮಣ್ ದುಬೈನಲ್ಲಿಯೂ ತಂಡವನ್ನು ಸೇರಿಕೊಳ್ಳುತ್ತಾರೆಯೇ ಎಂಬ ಬಗ್ಗೆ ಎರಡು ದಿನಗಳಲ್ಲಿ ದ್ರಾವಿಡ್ ಕೋವಿಡ್ ಟೆಸ್ಟ್ ತೆಗೆದುಕೊಂಡ ನಂತರವಷ್ಟೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಏಷ್ಯಾಕಪ್ನಲ್ಲಿ ಭಾರತದ ಮೊದಲ ಪಂದ್ಯ ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ನಡೆಯಲಿದೆ.
“2022 ರ ಏಷ್ಯಾ ಕಪ್ಗಾಗಿ ಯುಎಇಗೆ ತಂಡ ಹೊರಡುವ ಮೊದಲು ನಡೆಸಿದ ವಾಡಿಕೆಯ ಪರೀಕ್ಷೆಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಕೋವಿಡ್ -19 ಪಾಸಿಟಿವ್ ಬಂದಿದೆ” ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಸದ್ಯ ದ್ರಾವಿಡ್ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ನೆಗೆಟಿವ್ ಕೋವಿಡ್-19 ವರದಿಯೊಂದಿಗೆ ಹಿಂದಿರುಗಿದ ನಂತರ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಅಂತ ತಿಳಿಸಿದ್ದಾರೆ.