ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ನವರ ಅಟ್ಟಹಾಸಕ್ಕೆ ಅಂಕುಶ ಹಾಕಲು, ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಮುಂದಾಗಿದೆ. ಅದರಂತೆಯೇ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಿಎಂಗೆ ಡ್ರಾಫ್ಟ್ ಪ್ರತಿ ರವಾನಿಸಿದ್ದರು. ಇದೀಗ ಪರಿಶೀಲಿಸಿದ ಬಳಿಕ ಕರುಡು ಪ್ರತಿ ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆ ಅಂತಾ ಕರಡು ಪ್ರತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಸುಗ್ರೀವಾಜ್ಞೆ ಹೊರಬೀಳಲಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ ಜಾರಿಗೆ ಗ್ರೀನ್ಸಿಗ್ನಲ್ ಸಿಕ್ಕಿತ್ತು. ಅದರಂತೆಯೇ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಿಎಂಗೆ ಡ್ರಾಫ್ಟ್ ಪ್ರತಿ ರವಾನೆ ಮಾಡಿದ್ದರು. ಇದೀಗ ಪರಿಶೀಲಿಸಿದ ಬಳಿಕ ಡ್ರಾಫ್ಟ್ ಪ್ರತಿ ರಾಜ್ಯಪಾಲರಿಗೆ ರವಾನೆ ಮಾಡಲಾಗಿದೆ. ಶಿಕ್ಷೆ ಪ್ರಮಾಣದಲ್ಲಿ 3 ವರ್ಷದ ಬದಲು 10 ವರ್ಷ ಜೈಲು ಶಿಕ್ಷೆಗೆ ಒಳಪಡಿಸೋಕೆ ಬದಲಾವಣೆ ಮಾಡಿ ಕರಡು ಪ್ರತಿ ರವಾನೆ ಮಾಡಲಾಗಿದೆ. ಇನ್ನೇನಿದ್ದರೂ ರಾಜ್ಯಪಾಲರ ಅಂಕಿತ ಒಂದೇ ಬಾಕಿ ಇದೆ.