ಬಳ್ಳಾರಿ : ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಅವರ ಮನೆಯ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ಆಗಿ ಗುಂಡೇಟಿಗೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನಪ್ಪಿದ್ದ. ಬಳಿಕ ಬಳ್ಳಾರಿಯ ಎಸ್ ಪಿ ಪವನ್ ನಜ್ಜುರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಇದೀಗ ಇಂದು ಡಿಐಜಿಪಿ ಆಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಹ ವರ್ಗಾವಣೆ ಮಾಡಿದೆ.
ವರ್ತಿಕ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ ಬಳ್ಳಾರಿಯ ವಲಯ ಐಜಿಪಿಯಾಗಿ ಡಾ. ಪಿಎಸ್ ಹರ್ಷ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಿಗ್ಗೆಯಷ್ಟೇ ಐಜಿಪಿ ವರ್ತಿಕ ಕಟಿಯಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ ಬಳ್ಳಾರಿಯ ನೂತನ ವಲಯ ಐಜಿಪಿಯಾಗಿ ಪಿಎಸ್ ಹರ್ಷ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಉಸ್ತುವಾರಿ ಎಸ್ಪಿ ರಂಜಿತ್ ಕುಮಾರ್ ಉಪಸ್ಥಿತರಿದ್ದರು.








