ಕೊಡಗು : ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಮಗುವನ್ನು ಶ್ವಾನ ಒಂದು ಪತ್ತೆ ಹಚ್ಚಿರುವ ಘಟನೆ ಕೊಡಗು ನಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಕೊಂಕಣ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು.
ಕೊಡಗು ಜಿಲ್ಲೆಯ ತಾಲೂಕಿನ ಕೊಂಗಣ ಗ್ರಾಮದಲ್ಲಿ ಎರಡು ವರ್ಷದ ಸುನನ್ಯ ಕಾಫಿ ತೋಟದಲ್ಲಿ ದಾರಿ ತಪ್ಪಿ ಕಣ್ಮರೆಯಾಗಿದ್ದಳು. ಕಾಫಿ ಕೊಯ್ಲು ಹಿನ್ನೆಲೆಯಲ್ಲಿ ಮಕ್ಕಳನ್ನು ಜೊತೆಯಲ್ಲಿಯೇ ಪೋಷಕರು ಕರೆದುಕೊಂಡು ಹೋಗಿದ್ದರು. ಈ ವೇಳೆ ಸುನನ್ಯ ದಾರಿತಪ್ಪಿ ಕಳೆದು ಹೋಗಿದ್ದಳು. ಆಗ ಗ್ರಾಮಸ್ಥರ ಸಹಾಯದಿಂದ ಹಾಗೂ ಶ್ವಾನದ ಸಹಾಯದಿಂದ ಸುನನ್ಯಾಳನ್ನು ಪತ್ತೆಹಚ್ಚಲಾಗಿದೆ. ಶ್ವಾನದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.








