ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಸೀಳು ತುಟಿ ಹೊಂದಿರುವ 0-12 ತಿಂಗಳ ವಯಸ್ಸಿನ ಮಕ್ಕಳಿಗೆ ವಿಶೇಷ ಆಹಾರ ಪೂರಕ (Special feed supplements)ಗಳನ್ನು ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನನವಾಗುವ ಸೀಳು ತುಟಿ / ಅಂಗುಳಿನ ಶಸ್ತ್ರಚಿಕಿತ್ಸೆ ಅಗತ್ಯವಿರುವ 0-12 ತಿಂಗಳ ವಯಸ್ಸಿನ 671 ಮಕ್ಕಳಿಗೆ ವಿಶೇಷ ಆಹಾರ ಪೂರಕ (special feed supplements)ಗಳನ್ನು ರೂ.1,52,65,250/-ಗಳ ವೆಚ್ಚದಲ್ಲಿ 2025-26ನೇ ಸಾಲಿಗೆ KSMSCL ನ Drugs and chemicals ಅಡಿಯಲ್ಲಿ ವಾರ್ಷಿಕ ಇಂಡೆಂಟ್ ನಲ್ಲಿ ಖರೀದಿಸಲು ಅನುಮೋದನೆ ನೀಡಿದೆ.









