ಬೆಂಗಳೂರು : ಯಶ್ ತಾಯಿ ಅವರು ನಿರ್ಮಾಣ ಮಾಡಿದ್ದ ‘ಕೊತ್ತಲವಾಡಿ’ ಚಿತ್ರದ ಸಹ ನಟ ನಟಿಗೆ ಸಂಭಾವನೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಕೊತ್ತಲವಾಡಿ ಚಿತ್ರದಲ್ಲಿ ಸಹನಟ ಮಾತ್ರವಲ್ಲ ಸಹನಟಿಗೂ ಸಂಭಾವನೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಯಶ್ ತಾಯಿ ಪುಷ್ಪ ವಿರುದ್ಧ ಸಹನಟ ಮತ್ತು ನಟಿ ಗಂಭೀರವಾದ ಆರೋಪ ಮಾಡಿದ್ದಾರೆ.
ಸಂಭಾವನೆಗೆ ನಿರ್ದೇಶಕನ ಬಳಿ ನಟಿಯ ತಾಯಿ ಗೋಗರಿದಿದ್ದಾರೆ. ಪುತ್ರಿ ಸ್ವರ್ಣ ನಟನೆಗೆ ಸಂಭಾವನೆ ಕೊಡಿ ಎಂದು ತಾಯಿ, ಗೋಗರೆದಿದ್ದು ಸಹನಟಿ ತಾಯಿ ಮತ್ತು ನಿರ್ದೇಶಕ ಶ್ರೀ ರಾಜ್ ಆಡಿಯೋ ಸಂಭಾಷಣೆ ಕೂಡ ವೈರಲ್ ಆಗಿದೆ. ಪುತ್ರಿ ಕೆಲಸ ಮಾಡಿದ್ದ ಪೇಮೆಂಟ್ ಕೊಡಲು ನಿಮಗೆ ಆಗಲ್ವಾ ನನ್ನ ಮಗಳು ನಿಮ್ಮನ್ನು ನಂಬಿಕೊಂಡು ಮೂರು ತಿಂಗಳು ಕೆಲಸ ಮಾಡಿದ್ದಾಳೆ ಅಪ್ಪ ಇಲ್ಲ ನಾನೇ ಅವಳನ್ನು ನೋಡಿಕೊಳ್ಳಬೇಕು ಎಂದು ಮಾತನಾಡಿರುವ ಆಡಿಯೋ ವೈರಲ್ ಆಗಿದೆ.