ನವದೆಹಲಿ : ನಿನ್ನೆ ಒಂದು ವಿಡಿಯೋ ಕೂಡ ವೈರಲಾಗಿದ್ದು ಮೋಜ್ತಬಾ ಖಮನೈ ಅವರು ತಮ್ಮ ಮಿಲಿಟರಿ ರೂಂ ಗೆ ಎಂಟ್ರಿ ಕೊಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ತಮ್ಮ ಸೈನಿಕರಿಗೆ ನಿರ್ದೇಶನ ಹಾಗೂ ಸೂಚನೆ ಕೊಡುವಂತಹ ವಿಡಿಯೋ ವೈರಲ್ ಆಗಿತ್ತು. ಆದರೆ ಇರಾನ್ AI ವಿಡಿಯೋ ಜನರೇಟ್ ಮಾಡಿ ನಮ್ಮ ನಾಯಕ ಬದುಕಿದ್ದಾನೆ ನಮ್ಮ ಸೇನೆಗೆ ಮಾರ್ಗದರ್ಶನ ನಿರ್ದೇಶನ ಇನ್ನು ಸಿಗತಿದೆ ಎನ್ನುವ ವಿಡಿಯೋ ಹರಿಬಿಡುವ ಮೂಲಕ ಅಮೆರಿಕ ಮತ್ತು ಶತ್ರು ರಾಷ್ಟ್ರಗಳಿಗೆ ಸಂದೇಶ ಕೊಡುವಂತಹ ಪ್ರಯತ್ನ ಮಾಡಿದೆ ಎಂದು ತಿಳಿದು ಬಂದಿದೆ.
ಹೌದು ಇದೊಂದು ಎ.ಐ ಜನರೇಟ್ ವಿಡಿಯೋ ಎಂದು ಇದೀಗ ತಿಳಿದು ಬಂದಿದೆ. ಫೆಬ್ರವರಿ 28ರಂದು ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆದ ದಾಳಿಯ ಸಂದರ್ಭದಲ್ಲಿ ಆಯದುಲ್ಲ ಖಮನೈ ಹತ್ಯೆಯಗಿರುತ್ತೆ. ಅದೇ ಸಂದರ್ಭದಲ್ಲಿ ಮನೆಯಲ್ಲಿದ್ದಂತಹ ಮೋಜ್ತಬಾ ಖಮನೈ ಅವರಿಗೂ ದಾಳಿಯಿಂದ ಗಾಯಗಳಾಗಿದ್ದು ಅವರ ಕುಟುಂಬಸ್ಥರು ಈ ಒಂದು ದಾಳಿಯಲ್ಲಿ ಸತ್ತಿರುತ್ತಾರೆ.
ಆದರೆ ಮೋಜ್ತಬಾ ಖಮನೈ ಅವರ ಆರೋಗ್ಯ ಹೇಗಿದೆ ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ ಅಂತ ಇದುವರೆಗೂ ಅಧಿಕೃತವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಇನ್ನೊಂದು ಕಡೆ ಅವರು ಅನಾರೋಗ್ಯದಿಂದಿದ್ದು, ಅನೇಕ ಸಮಸ್ಯೆ ಆಗಿದ್ದು ರಷ್ಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾತುಗಳು ಕಳೆದ ಎರಡು ವಾರಗಳಿಂದ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಸುದ್ದಿ ಮಾಡಿದ್ದವು.
ಇದೀಗ ಗುಪ್ತಚರ ಇಲಾಖೆ ಮಾಹಿತಿಯಂತೆ ಇವರು ಸದ್ಯಕ್ಕೆ ಇರಾನ್ ಪವಿತ್ರ ಸ್ಥಳದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಅವರು ಒಂದು ಕಾಲು ಕೂಡ ಕಳೆದುಕೊಂಡಿದ್ದಾರೆ ಅವರು ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಹೀಗಾಗಿ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ಮಾಹಿತಿ ಸಿಗುತ್ತಿದೆ.
🚨🇮🇷 the first appearance of Commander-in-Chief Ayatollah Seyyed Mejbi Khamenei in the war room… pic.twitter.com/7Zg66EVlnz
— Iran TV (@Iran_TVv) April 5, 2026








