ಬೆಂಗಳೂರು : ಮೇ. 29 ರಿಂದ 2024-25 ಸಾಲಿನ ಶಾಲೆಗಳು ಪ್ರಾರಂಭವಾಗಿದ್ದು, ಇಂದಿನಿಂದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಲಿದ್ದಾರೆ. ಈ ನಡುವೆ ರಾಜ್ಯದ ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶಾಲಾ ಪ್ರವೇಶ ಶುಲ್ಕದ ವಿವರಗಳನ್ನು ಶಿಕ್ಷಣ ಇಲಾಖೆ ಪ್ರಟಿಸಿದೆ.
ರಾಜ್ಯದ ಶಾಲೆಗಳಾದ್ಯಂತ ಚಟುವಟಿಕೆಗಳ ಏಕರೂಪದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಈ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಯಲ್ಲಿ ತಿಂಗಳ ವಾರು ಪಾಠ ವಿತರಣೆ, ಪಠ್ಯೇತರ ಚಟುವಟಿಕೆಗಳು, ಫಲಿತಾಂಶ-ಆಧಾರಿತ ಚಟುವಟಿಕೆಗಳು, ವಿಶೇಷ ಶನಿವಾರ (ಬ್ಯಾಗ್ ಮುಕ್ತ ದಿನ), ಪಾಠ ಸಂಬಂಧಿತ ಚಟುವಟಿಕೆಗಳು, ಬ್ಯಾಂಕ್ ನಿರ್ವಹಣೆ, ಪರೀಕ್ಷೆಗಳು ಮತ್ತು ಮೌಲ್ಯಮಾಪನ ವಿಶ್ಲೇಷಣೆಗೆ ಸಮಯ ನೀಡಿದೆ.
ಶುಲ್ಕ ವಿನಾಯಿತಿ
1) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಲ್ಲಾ ವಿದ್ಯಾರ್ಥಿಗಳಿಗೆ
2) ಎಲ್ಲಾ ಹೆಣ್ಣು ಮಕ್ಕಳಿಗೆ
3) ರೂ 2 ಲಕ್ಷ ಮಿತಿಯೊಳಗೆ ಪ್ರವರ್ಗ- ರಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ
4) ರೂ 44,500/- ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ
ವಿಶೇಷ ಸೂಚನೆ :
1. ಸೇವಾದಳ, ಸೌಟ್ಸ್ ಮತ್ತು ಗೈಡ್ಸ್ ಘಟಕಗಳು ಇರುವ ಶಾಲೆಗಳಲ್ಲಿ ಪ್ರತಿ ಘಟಕಕ್ಕೆ ತಲಾ 5.00 ರೂ ಸಂಗ್ರಹಿಸುವುದು.
2. ವಿದ್ಯಾರ್ಥಿ ಕ್ರೀಡಾ ನಿಧಿ, ಶಿಕ್ಷಕರ ದಿನಾಚರಣೆ, ಬಾವುಟದ ನಿಧಿ (ಕ್ರಮ ಸಂಖ್ಯೆ 9, 10, 11, ಮತ್ತು 12), ಗಳಿಗೆ ಶುಲ್ಕ ರಿಯಾಯಿತಿ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಈ ನಿಧಿಗಳ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.