ಮೈಸೂರು : ಹುಲಿ ದಾಳಿಯಿಂದ ನಿನ್ನೆ ಮೈಸೂರಿನಲ್ಲಿ ರೈತರ ರಾಜಶೇಖರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಕಾರಕ್ಕೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಗ್ರಾಮಸ್ಥರು ಘೆರಾವ್ ಹಾಕಿರುವ ಘಟನೆ ನಡೆದಿದೆ.
ಮೈಸೂರಿನ ಕೆಆರ್ ಆಸ್ಪತ್ರೆ ಶವಗಾರದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನು ಅಮಾನತು ಮಾಡಬೇಕು, ಮತನ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ ನಿನ್ನೆ ಹುಲಿದಾಳಿಯಿಂದ ರೈತ ರಾಜಶೇಖರ್ ಸಾವನಪ್ಪಿದ್ದ ಸರಗೂರು ತಾಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಜಮೀನಿನಲ್ಲಿ ದನ ಮೆಯಿಸುವಾಗ ಹುಲಿ ದಾಳಿ ಮಾಡಿತ್ತು ಈ ವೇಳೆ ಸರಗೂರು ತಾಲೂಕಿನಲ್ಲಿಯೇ ಸಚಿವ ಈಶ್ವರ ಖಂಡ್ರೆ ಇದ್ದರು ಮೃತದೇಹವನ್ನು ತೆಗೆಯದೆ ಕುಟುಂಬಸ್ಥರು ಮತ್ತು ಜನರು ಪ್ರತಿಭಟಿಸಿದ್ದರು.
ಇಂದು ಶವಗಾರದ ಬಳಿ ಸಚಿವ ಈಶ್ವರ ಖಂಡ್ರೆ ಆಗಮಿಸಿದ್ದಾರೆ. ಇವಳೆ ಗ್ರಾಮಸ್ಥರು ಈಶ್ವರ ಖಂಡ್ರೆ ಅವರನ್ನು ತಡೆದು ಘೇರಾವ್ ಪ್ರತಿಭಟನೆ ನಡೆಸಿದರು. ಇವಳೇ ರೈತರು ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದಾಗ ಸಚಿವ ಈಶ್ವರ ಖಂಡ್ರೆ ಯಾವುದೇ ಅಧಿಕಾರಿಗಳ ತಪ್ಪು ಇದ್ದರೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.








