ಬೆಂಗಳೂರು : ನಿನ್ನೆ ತಾನೆ ದಾವಣಗೆರೆಯಲ್ಲಿ ನೊಣವಿನಕೆರೆ ಮಠದ ಶ್ರೀಗಳು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೇ ಅವಧಿಯಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನಿಶ್ಚಲನಂದನಾಥ ಸ್ವಾಮೀಜಿ ಅವರು ಕೂಡ ಡಿಕೆ ಶಿವಕುಮಾರ್ ಸಿಎಂ ಆಗುವುದು ಖಚಿತ.ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮಂಡ್ಯದಲ್ಲಿ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನಿಶ್ಚಲನಂದನಾಥ ಸ್ವಾಮಿಜಿ ಮಾತನಾಡಿ, ಡಿಕೆ ಶಿವಕುಮಾರ್ ಸಿಎಂ ಆಗೋದು ಖಚಿತ. ಶಿವಕುಮಾರ್ ಚುನಾವಣೆಯ ವೇಳೆ ಕಷ್ಟಪಟ್ಟು ಪಕ್ಷ ಮುನ್ನಡೆಸಿದ್ದಾರೆ. ಪಕ್ಷದ ಹಿರಿಯರಿಗೆ ಮುಖ್ಯಮಂತ್ರಿ ಆಗುವ ಹಂಬಲ ಇದ್ದೇ ಇರುತ್ತದೆ. ಡಿಕೆ ಇಷ್ಟಪಡುವ ಎಲ್ಲರಿಗೂ ಅವರು ಸಿಎಂ ಆಗಲಿ ಎಂಬ ಬಯಕೆ ಇದೆ. ನಾವು ಕೂಡ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲು ಎಂದು ಬಯಸುತ್ತೇವೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ತಾಳ್ಮೆಯಿಂದ ಕಾದು ಒಳ್ಳೆಯ ಸ್ಥಾನ ಪಡೆಯುತ್ತಾರೆ. ಡಿಕೆ ಶಿವಕುಮಾರ್ ಅವರನ್ನು ಹತ್ತಿರ ನೋಡಿದ್ದೆನೆ ಅವರು ಯಾವುದಕ್ಕೂ ಆತರ ಪಡುವುದಿಲ್ಲ. ಹೈಕಮಾಂಡ್ ಅಪೇಕ್ಷೆ ಮೇರೆಗೆ ಡಿಕೆ ಶಿವಕುಮಾರ್ ಅಧಿಕಾರ ಪಡೆದುಕೊಳ್ಳುತ್ತಾರೆ. ಡಿಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಒಕ್ಕಲಿಗ ಸಮುದಾಯ ಬೆಂಬಲಿಸಿತ್ತು ಎಂದು ಮಂಡ್ಯ ನಗರದಲ್ಲಿ ನಿಶ್ಚಲನಂದನಾಥ ಸ್ವಾಮೀಜಿ ಹೇಳಿಕೆ ನೀಡಿದರು.








