ಬೆಂಗಳೂರು : ಮಹತ್ವದ ಬೆಳವಣಿಗೆ ಒಂದರಲ್ಲಿ ಇಂದು ಸಂಜೆ 7:40 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಬೇಕಿತ್ತು ಆದರೆ ದಿಢೀರ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ದೆಹಲಿ ಪ್ರವಾಸ ಮುಂದೂಡಿದ್ದಾರೆ.
ಈಗಾಗಲೇ ಡಿಕೆ ಶಿವಕುಮಾರ್ ಸಹೋದರ ಮಾಜಿ ಸಂಸದ ಡಿಕೆ ಸುರೇಶ್ ದೆಹಲಿಯಲ್ಲಿ ಇದ್ದು ಇಂದು ಡಿಸಿಎಂ ಡಿಕೆ ಶಿವಕುಮಾರ್ 7:40 ಸುಮಾರಿಗೆ ದೆಹಲಿಗೆ ತೆರಳಬೇಕಿತ್ತು. ಎರಡೆರಡು ಬಾರಿ ಡಿಕೆ ಶಿವಕುಮಾರ್ ದೆಹಲಿ ಟಿಕೆಟ್ ಬುಕ್ ಮಾಡಿದ್ದರು. 7:40ಕ್ಕೆ ದೆಹಲಿಗೆ ವಿಮಾನ ಇತ್ತು ಇದೀಗ ಏಕಾಏಕಿ ಡಿಕೆ ಶಿವಕುಮಾರ್ ದೆಹಲಿ ಭೇಟಿಯನ್ನು ಮುಂದೂಡಿದ್ದಾರೆ.
ನಿನ್ನೆ ದೆಹಲಿ ಹೈಕಮಾಂಡ್ ಕರೆದರೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿಕೊಂಡು ದೆಹಲಿಗೆ ತೆರಳುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ ಇಂದು ಎರಡೆರಡು ಬಾರಿ ಡಿಕೆ ಶಿವಕುಮಾರ್ ಟಿಕೆಟ್ ಬುಕ್ ಮಾಡಿದರು. ಆದರೆ ದಿಡೀರ್ ಎಂದು ತಮ್ಮ ದೆಹಲಿ ಭೇಟಿಯನ್ನು ಮುಂದೂಡಿದ್ದಾರೆ.








