ಬೆಂಗಳೂರು : ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಸಿಎಂ ಸಿದ್ದರಾಮಯ್ಯ ನಾನು ಸಹ ಅಭಿಯಾನದಲ್ಲಿ ಸಹಿ ಹಾಕಿದ್ದೇವೆ 1 ಕೋಟಿ 12 ಲಕ್ಷದ 41,000 ಸಹಿ ಸಂಗ್ರಹವಾಗಿದ್ದು ನವೆಂಬರ್ ಹತ್ತಿರ ಒಳಗೆ ಸಹಿ ಸಂಗ್ರಹಿಸಿ ಹೈಕಮಾಂಡ್ಗೆ ಕೊಡುತ್ತೇವೆ ಮೊಬೈಲ್ ನಂಬರ್ ಸಮೇತ ಸಹಿ ಸಂಗ್ರಹ ಆಗಿದೆ ನವೆಂಬರ್ 25 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಭೆ ಹಮ್ಮಿಕೊಂಡಿದ್ದು ಮತಗೊಳ್ಳತನ ವಿರುದ್ಧ ಕಾಂಗ್ರೆಸ್ ನಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ತಿಳಿಸಿದರು.
ಕಲ್ಬುರ್ಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲೂ ಮತಗಳ್ಳ ತನ ನಡೆದಿದೆ. ಆಳಂದ್ ನಲ್ಲಿ ಮಹಿಳೆಯೊಬ್ಬರ ಸಹೋದರನ ಮತ ಡಿಲೀಟ್ ಆಗಿದೆ. ಈ ಸಂಬಂಧ ದೂರು ಕೊಡುತ್ತಾರೆ ತನಿಖೆಯು ಸಹ ಆರಂಭವಾಗುತ್ತದೆ. ಅಧಿಕಾರಿಗಳು ಕೂಡ ಸಸ್ಪೆಂಡ್ ಆದರು. ಮತಪಟ್ಟಿಯಿಂದ 6000 ಮತ ತೆಗೆಯುವ ಪ್ರಯತ್ನ ಮಾಡುತ್ತಾರೆ. ಮತಗಳ್ಳತನ ಸಂಬಂಧ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಹೊರ ರಾಜ್ಯದವರಿಂದ ಮತ ಡಿಲೀಟ್ ಮಾಡುವ ಪ್ರಯತ್ನ ನಡೆದಿದೆ. ಒಟ್ಟು ರೂ.1,3,000 ನಕಲು ಮಾಡಿದರು. ಗರುಡಾ ಆಪ್ ಬಳಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಎಂದು ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ನ್ಯೂನ್ಯತೆಗಳು ಇದ್ದು ಮಾದೇವಪುರ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಮತ ದುರ್ಬಳಕೆಯಾಗಿದೆ ಒಂದೇ ಮನೆಯಲ್ಲಿ ಹೆಚ್ಚು ವೋಟ್ ಇರುವುದು ಗುರುತು ಮಾಡಿದ್ದೇವೆ. ರಾಹುಲ್ ಗಾಂಧಿ ಕೂಡ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಮತಗಳ್ಳತನ ಬಗ್ಗೆ ಅಭಿಯಾನ ಕೂಡ ನಡೆಸಿದ್ದೇವೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 2,40,000 ವೋಟ್ ಇತ್ತು ಕಾಂಗ್ರೆಸ್ ಗೆ ಮತ ಹಾಕುವವರನ್ನು ಗುರುತಿಸಿ ಮತ ಶಿಫ್ಟ್ ಮಾಡಿದ್ದಾರೆ ಮತದಾರರನ್ನು ಬೇರೆ ಕಡೆಗೆ ಶಿಫ್ಟ್ ಮಾಡಿ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಆರೋಪಿಸಿದರು.








