ದಾವಣಗೆರೆ : ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಇಂದು ಮತದಾನ ಆರಂಭವಾಗಿದ್ದು, ಈಗಾಗಲೇ ಮತಗಟ್ಟೆಗೆ ಬಂದು ಮತದಾರರು ಮತ ಚಲಾಯಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಿಂದ ನೀತಿ ಉಲ್ಲಂಘನೆ ಆಗಿದ್ದು, ಬಿಜೆಪಿ ಮುಖಂಡರು ಪಲಾವ್ ಹಂಚಿಕೆ ಮಾಡಿದ್ದಾರೆ.
ಹೌದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತಗಟ್ಟೆ ಸಂಖ್ಯೆ 195 ರ ಬಳಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಶೇಖರಪ್ಪ ಬಡಾವಣೆಯ ಮತಗಟ್ಟೆ ಸಂಖ್ಯೆ 195 ರಲ್ಲಿ ಶಾಮಿಯಾನ ಹಾಕಿ ಮತದಾರರಿಗೆ ಪಲಾವ್ ಹಂಚಿಕೆ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಮತದಾರರಿಗೆ ಪಲಾವ್ ಹಂಚಿಕೆ ಮಾಡಿದ್ದು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.








