ಬೆಂಗಳೂರು : ಬೆಂಗಳೂರಲ್ಲಿ ಕೋಗಿಲು ಲೇಔಟ್ ಅನಧಿಕೃತ ಮನೆ ತೆರವು ಪ್ರಕರಣಕ್ಕೆ ಸಂಬಂಧಪಟ್ಟಂತೆ, ಅತಿಕ್ರಮಣ ಮಾಡಿದವರ ವಿರುದ್ಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಲೇಔಟ್ ನಲ್ಲಿ ಅನಧಿಕೃತ ಮನೆಗಳನ್ನು ತೆರವುಗೊಳಿಸಲಾಗಿದ್ದು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ವಿಜಯ್, ವಾಸಿಂ ಉಲ್ಲಾಬೇಗ್ ಸೇರಿದಂತೆ ನಾಲ್ವರ ವಿರುದ್ಧ FIR ದಾಖಲಾಗಿದೆ.
A1 ವಿಜಯ್, A2 ವಾಸಿಂ ಉಲ್ಲಾಬೇಗ್, A3 ಅಂಜಿನಪ್ಪ, A4 ರಾಬೀನ್ ಎನ್ನುವವರ ವಿರುದ್ಧ ಇದೀಗ ಯಲಹಂಕ ಠಾಣೆ ಪೋಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ನಾಲ್ಕು ಎಕರೆ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ಕಚ್ಚಾಮನೆ ನಿರ್ಮಾಣ ಮಾಡಿದ್ದಾರೆ 160 ಮನೆಗಳನ್ನು ನಿರ್ಮಾಣ ಮಾಡಿ ಹಣ ಪಡೆದು, ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.








