Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ ಖಂಡನೀಯ: ವಿಶ್ವಸಂಸ್ಥೆಯಲ್ಲಿ ‘ಇಸ್ಲಾಮೋಫೋಬಿಯಾ’ ಕುರಿತು ಭಾರತದ ಕಠಿಣ ನಿಲುವು

17/03/2026 9:51 AM

BIG NEWS : ಅಪ್ರಾಪ್ತರಿಗೆ ಮದುವೆ ಮಾಡಿದರೆ `ಪೋಷಕರು, ಪುರೋಹಿತರು, ಛತ್ರದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ : ಹೈಕೋರ್ಟ್ ವಾರ್ನಿಂಗ್ !

17/03/2026 9:50 AM

ಜನಸಾಮಾನ್ಯರ ಬದುಕಿಗೆ ಆಸರೆಯಾದ ಸರ್ಕಾರದ ಪ್ರಮುಖ ಯೋಜನೆಗಳು ಇವು : ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕು !

17/03/2026 9:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಅಪ್ರಾಪ್ತರಿಗೆ ಮದುವೆ ಮಾಡಿದರೆ `ಪೋಷಕರು, ಪುರೋಹಿತರು, ಛತ್ರದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ : ಹೈಕೋರ್ಟ್ ವಾರ್ನಿಂಗ್ !
KARNATAKA

BIG NEWS : ಅಪ್ರಾಪ್ತರಿಗೆ ಮದುವೆ ಮಾಡಿದರೆ `ಪೋಷಕರು, ಪುರೋಹಿತರು, ಛತ್ರದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ : ಹೈಕೋರ್ಟ್ ವಾರ್ನಿಂಗ್ !

By kannadanewsnow5717/03/2026 9:50 AM

ಬೆಂಗಳೂರು: ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಸಮರ ಸಾರಿರುವ ಕರ್ನಾಟಕ ಹೈಕೋರ್ಟ್, ಈ ಕೃತ್ಯದಲ್ಲಿ ಭಾಗಿಯಾಗುವ ಪುರೋಹಿತರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕಲ್ಯಾಣ ಮಂಟಪದ ಮಾಲೀಕರ ವಿರುದ್ಧವೂ ಕ್ರಿಮಿನಲ್ ಕ್ರಮ ಜರುಗಿಸಬಹುದು ಎಂದು ಎಚ್ಚರಿಕೆ ನೀಡಿದೆ.

16 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹವಾದ ಪತಿ ಹಾಗೂ ಮದುವೆ ಮಾಡಿಕೊಟ್ಟ ಪೋಷಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

ಪ್ರಕರಣದ ಹಿನ್ನೆಲೆ:

ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದೇವನಹಳ್ಳಿಯ ಮಂಜುನಾಥ್ ಎಂಬಾತನೊಂದಿಗೆ 16 ವರ್ಷದ ಬಾಲಕಿಯ ವಿವಾಹವನ್ನು ಆಕೆಯ ಪೋಷಕರು ನೆರವೇರಿಸಿದ್ದರು. ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆಯನ್ನು ನೋಂದಣಿ (Register) ಮಾಡಿಸಲಾಗಿತ್ತು. “ಈಗ ಬಾಲಕಿಗೆ ವಯಸ್ಸಾಗಿರುವುದರಿಂದ ಮತ್ತು ಅವರು ಸಂಸಾರ ನಡೆಸುತ್ತಿರುವುದರಿಂದ ಬಾಲ್ಯವಿವಾಹದ ಕೇಸ್ ರದ್ದುಪಡಿಸಬೇಕು” ಎಂದು ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನ ಪ್ರಮುಖ ಅವಲೋಕನಗಳು:

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾಗೊಳಿಸಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಹೇಳಿದೆ:

  • ಶಿಕ್ಷಣದ ಹಕ್ಕು ಭಗ್ನ: “ವಿದ್ಯೆ ಕಲಿಯುವ ವಯಸ್ಸಿನಲ್ಲಿ ಬಾಲಕಿಯ ಮೇಲೆ ಸಂಸಾರದ ಹೊಣೆ ಹೊರಿಸುವುದು ಸರಿಯಲ್ಲ. ಬಾಲ್ಯವಿವಾಹದಿಂದ ಬಾಲಕಿಯ ಶಿಕ್ಷಣದ ಕನಸುಗಳು ಭಗ್ನವಾಗುತ್ತವೆ” ಎಂದು ಪೀಠ ವಿಷಾದ ವ್ಯಕ್ತಪಡಿಸಿದೆ.

  • ಕಾಯ್ದೆಯ ಉದ್ದೇಶ ವಿಫಲ: ಕೇವಲ ಮದುವೆ ಈಗ ಕಾನೂನುಬದ್ಧವಾಗಿದೆ ಎಂಬ ಕಾರಣಕ್ಕೆ ಬಾಲ್ಯವಿವಾಹದ ಕೇಸ್ ರದ್ದುಪಡಿಸಿದರೆ, ‘ಬಾಲ್ಯ ವಿವಾಹ ನಿಷೇಧ ಕಾಯ್ದೆ’ಯ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

  • ಆಯೋಜಕರಿಗೂ ಸಂಕಷ್ಟ: ಇನ್ನು ಮುಂದೆ ದೇವಸ್ಥಾನಗಳಲ್ಲಿ ಬಾಲ್ಯವಿವಾಹ ನಡೆದರೆ ಅಲ್ಲಿನ ಆಡಳಿತ ಮಂಡಳಿ ಮತ್ತು ಪುರೋಹಿತರು, ಹಾಗೂ ಚೌಟ್ರಿ ಅಥವಾ ಕಲ್ಯಾಣ ಮಂಟಪಗಳಲ್ಲಿ ನಡೆದರೆ ಅದರ ಆಯೋಜಕರು ಮತ್ತು ಮಾಲೀಕರನ್ನೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ತೀರ್ಪು: ಆರೋಪಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಪೀಠವು, ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿದೆ. ಈ ತೀರ್ಪು ಬಾಲ್ಯವಿವಾಹವನ್ನು ಪ್ರೋತ್ಸಾಹಿಸುವವರಿಗೆ ಮತ್ತು ಮೌನವಾಗಿ ಸಹಕರಿಸುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ.

BIG NEWS: Criminal case against parents hut owners if minors get married: High Court warning! priests
Share. Facebook Twitter LinkedIn WhatsApp Email

Related Posts

ಜನಸಾಮಾನ್ಯರ ಬದುಕಿಗೆ ಆಸರೆಯಾದ ಸರ್ಕಾರದ ಪ್ರಮುಖ ಯೋಜನೆಗಳು ಇವು : ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕು !

17/03/2026 9:44 AM2 Mins Read

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

17/03/2026 9:41 AM2 Mins Read

BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !

17/03/2026 9:36 AM1 Min Read
Recent News

ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ ಖಂಡನೀಯ: ವಿಶ್ವಸಂಸ್ಥೆಯಲ್ಲಿ ‘ಇಸ್ಲಾಮೋಫೋಬಿಯಾ’ ಕುರಿತು ಭಾರತದ ಕಠಿಣ ನಿಲುವು

17/03/2026 9:51 AM

BIG NEWS : ಅಪ್ರಾಪ್ತರಿಗೆ ಮದುವೆ ಮಾಡಿದರೆ `ಪೋಷಕರು, ಪುರೋಹಿತರು, ಛತ್ರದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ : ಹೈಕೋರ್ಟ್ ವಾರ್ನಿಂಗ್ !

17/03/2026 9:50 AM

ಜನಸಾಮಾನ್ಯರ ಬದುಕಿಗೆ ಆಸರೆಯಾದ ಸರ್ಕಾರದ ಪ್ರಮುಖ ಯೋಜನೆಗಳು ಇವು : ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕು !

17/03/2026 9:44 AM

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

17/03/2026 9:41 AM
State News
KARNATAKA

BIG NEWS : ಅಪ್ರಾಪ್ತರಿಗೆ ಮದುವೆ ಮಾಡಿದರೆ `ಪೋಷಕರು, ಪುರೋಹಿತರು, ಛತ್ರದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ : ಹೈಕೋರ್ಟ್ ವಾರ್ನಿಂಗ್ !

By kannadanewsnow5717/03/2026 9:50 AM KARNATAKA 1 Min Read

ಬೆಂಗಳೂರು: ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಸಮರ ಸಾರಿರುವ ಕರ್ನಾಟಕ ಹೈಕೋರ್ಟ್, ಈ ಕೃತ್ಯದಲ್ಲಿ ಭಾಗಿಯಾಗುವ ಪುರೋಹಿತರು, ದೇವಸ್ಥಾನದ…

ಜನಸಾಮಾನ್ಯರ ಬದುಕಿಗೆ ಆಸರೆಯಾದ ಸರ್ಕಾರದ ಪ್ರಮುಖ ಯೋಜನೆಗಳು ಇವು : ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕು !

17/03/2026 9:44 AM

ಮಗಳ ಭವಿಷ್ಯಕ್ಕೆ 15 ವರ್ಷ ಹೂಡಿಕೆ ಮಾಡಿದ್ರೆ ಮುಂದಿನ 6 ವರ್ಷ ಸರ್ಕಾರವೇ ಬೆಳೆಸುತ್ತೆ ನಿಮ್ಮ ಹಣ : ಇಲ್ಲಿದೆ ಸೂಪರ್ ಸ್ಕೀಮ್ !

17/03/2026 9:41 AM

BREAKING : ಲಂಚ ಸ್ವೀಕರಿಸುವಾಗ ಲೋಕಾಯುಕ್ತಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ `PDO’ : ಕೈ ಕುಯ್ದುಕೊಂಡು ಹೈಡ್ರಾಮಾ !

17/03/2026 9:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.