ಕಲಬುರ್ಗಿ : ಕೋವಿಡ್ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಕೋವಿಡ್ ಕಾಲದಲ್ಲಿ ಹಗರಣ ನಡೆದಿತ್ತು. ಆ ಪ್ರಕರಣ ಸಂಬಂಧ ಈಗ ಎಫ್ಐಆರ್ ದಾಖಲಾಗಿದೆ. ಎಸ್ಐಟಿ ರಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಿರ್ಧರಿಸುತ್ತಾರೆ. ಈ ಒಂದು ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಇದ್ದರೂ ಕೂಡ ನಾವು ಯಾರನ್ನು ಬಿಡುವುದಿಲ್ಲ.ತನಿಖೆ ಮಾಡಲು ಪೊಲೀಸರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ತನಿಖೆ ಮಾಡುತ್ತಿದ್ದ ವೇಳೆ ನಾನು ಹೆಸರು ಹೇಳಿದರೆ ತಪ್ಪಾಗುತ್ತದೆ. ಅವ್ಯವಹಾರ ಆಗಿದೆ ಎಂದು ನ್ಯಾ. ಕುನ್ಹಾ ವರದಿಯಲ್ಲಿ ಉಲ್ಲೇಖ ಆಗಿದೆ ಅದರ ಆಧಾರದ ಮೇಲೆ ಎಫ್ಐಆರ್ ದಾಖಲಾಗುತ್ತದೆ. ಇದಕ್ಕೆ ಬಿಜೆಪಿಯವರು ಯಾಕೆ ಭಯ ಪಡಬೇಕು? ಯಾರನ್ನು ಭಯ ಬೀಳಿಸುವುದಕ್ಕೆ ನಾವು ತನಿಖೆ ಮಾಡಿಸುತ್ತಿಲ್ಲ. ಕೋವಿಡ್ ವೇಳೆ ಆಕ್ಸಿಜನ್ ಇಲ್ಲದೆ ಜನ ಬೀದಿಯಲ್ಲಿ ಹೆಣವಾಗಿದ್ದಾರೆ ಯಾರ ವಿರುದ್ಧವೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ರಾಜ್ಯದ ಜನರಿಗೆ ಮಾತು ಕೊಟ್ಟಂತೆ ನಾವು ತನಿಖೆ ಮಾಡಿಸುತ್ತೇವೆ ಎಂದು ಹೇಳಿಕೆ ನೀಡಿದರು.
ಇನ್ನೂ ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಈ ಕುರಿತು ಪ್ರತಿಕ್ರಿಯೆ ನೀಡಿ ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ನಾನು ಸಿಂಧನೂರಿಗೆ ಭೇಟಿ ನೀಡಿದ್ದೇನೆ. ಟೆಸ್ಟ್ ಸ್ಯಾಂಪಲ್ ವರದಿಯ ಬಳಿಕ ಆರೋಗ್ಯ ಸಚಿವರು ಈ ಕುರಿತು ಉತ್ತರ ನೀಡುತ್ತಾರೆ. ಸೋಮವಾರ ಸದನದಲ್ಲಿ ಆರೋಗ್ಯ ಇಲಾಖೆಯ ಸಚಿವರು ಉತ್ತರ ನೀಡುತ್ತಾರೆ.
ಇನ್ನೂ ರಿಮ್ಸ್ ಆಸ್ಪತ್ರೆಯಲ್ಲಿ ಐವರು ಬಾಣಂತಿಯರ ಸಾವು ಪ್ರಕರಣ ಗೊತ್ತಿಲ್ಲ. ರಿಮ್ಸ್ ಆಸ್ಪತ್ರೆಯಲ್ಲಿ ರಿಂಗರ್ ಐವಿ ಬಳಕೆ ಮಾಡಿಲ್ಲ. ಮುಖ್ಯಮಂತ್ರಿ ಈಗಾಗಲೇ ಒಂದು ಕಮಿಟಿ ರಚನೆ ಮಾಡಿ ತನಿಖೆಗೆ ಆದೇಶಿಸಿದ್ದಾರೆ. ಸಿಂಧನೂರಿನ ಬಗ್ಗೆ ಮಾತ್ರ ಮಾಹಿತಿ ಇದೆ. ಆದರೆ ಉಳಿದ ವಿಚಾರ ನನಗೆ ಗೊತ್ತಿಲ್ಲ. ತನಿಖಾವ ವರದಿ ಪರಿಶೀಲನೆ ಮಾಡಿದ ಬಳಿಕ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.