ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧದ ಮುಡಾ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರುದಾರ ಸ್ನೇಹ ಮಯಿಕೃಷ್ಣ ಸಲ್ಲಿಸಿದ ಖಾಸಗಿ ದೂರು ಸಂಬಂಧ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ವಿಚಾರಣೆ ನಡೆಸಿದ ಕೋರ್ಟ್ ಬಿ ರಿಪೋರ್ಟ್ ಸಂಬಂಧ ಜನವರಿ 22ಕ್ಕೆ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿತು. ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿಯ ವಿರುದ್ಧ ಯಾವುದೇ ಸಾಕ್ಷಿಗಳು ಕಂಡುಬಂದಿಲ್ಲ. 70 ಸಾಕ್ಷಿಗಳಲ್ಲಿ ಯಾರು ಪ್ರಭಾವ ಬೀರಿರುವುದಾಗಿ ಹೇಳಿಲ್ಲ ಅಂಶಗಳನ್ನು ಪರಿಗಣಿಸಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಬಿ ರಿಪೋರ್ಟ್ ತಿರಸ್ಕರಿಸಬಹುದಾದ ಲೋಪಗಳು ಇಲ್ಲ ಎಂದು ಲೋಕಾಯುಕ್ತ ಎಸ್ಪಿಪಿ ವೆಂಕಟೇಶ್ ಅರಬಟ್ಟಿ ವಾದ ಮಂಡಿಸಿದರು. ಈ ವೇಳೆ ಜಡ್ಜ್ ಸಂತೋಷ ಗಜಾನನ ಭಟ್ ಆದೇಶ ಕಾಯದರಿಸಿದರು.








