ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏ.23ರಿಂದ ಪ್ರಕರಣದ ಸಾಕ್ಷಿ ವಿಚಾರಣೆ ಹಿನ್ನೆಲೆಯಲ್ಲಿ ಎಸ್ಐಟಿ ಸಂಗ್ರಹಿಸಿದ ಡಿಜಿಟಲ್ ಸಾಕ್ಷಿ ವೀಕ್ಷಣೆಗೆ ಬೆಂಗಳೂರಿನ ಜನಪ್ರತಿನಿದಿಗಳ ನ್ಯಾಯಾಲಯ ಅವಕಾಶ ನೀಡಿತು.
ಪ್ರಕರಣ ಸಂಬಂಧ ಇಂದು ಜನಪ್ರತಿನಿದಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಐಟಿ ತಜ್ಞ ಶುಭಂಗೆ ವಿಡಿಯೋ ನೋಡಲು ಇದೀಗ ಕೋರ್ಟ್ ಅವಕಾಶ ನೀಡಿದ್ದು, ಈ ಕುರಿತು ಪ್ರಜ್ವಲ್ ರೇವಣ್ಣ ಪರ ವಕೀಲರು ವಿಡಿಯೋ ವೀಕ್ಷಣೆಗೆ ಅವಕಾಶ ಕೋರಿ ಮನವಿ ಮಾಡಿದ್ದರು. ಪ್ರಜ್ವಲ್ ಅವರ ಇಬ್ಬರು ವಕೀಲರು, ಎಸ್ಪಿಪಿ ಅಥವಾ ಸಹಾಯಕರು, ಪ್ರಜ್ವಲ್ ರೇವಣ್ಣ ಪರ ಐಟಿ ತಜ್ಞ, ತನಿಖಾಧಿಕಾರಿ ಹಾಗೂ ಸಹಾಯಕರು ವಿಡಿಯೋ ವೀಕ್ಷಣೆಗೆ ಹಾಜರಿರಬೇಕು.
ಇಂದು, ಏಪ್ರಿಲ್ 21 ರಂದು ವಿಡಿಯೋ ಕಾನ್ಫರೆನ್ಸ್ ರೂಮ್ನಲ್ಲಿ ವಿಡಿಯೋ ವೀಕ್ಷಣೆ ನಡೆಯಲಿದೆ. ಖಾಸಗಿ ವಿಡಿಯೋವಾಗಿದ್ದರಿಂದ ಕಾಪಿ ಮಾಡಲು ಅವಕಾಶವಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ಜಡ್ಜ್ ಸಂತೋಷ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ತನ್ನದೇ ಪ್ರಕರಣದಲ್ಲಿ ಎರಡನೇ ಬಾರಿಗೆ ಮಾಜು ಸಂಸದ ಪ್ರಜ್ವಲ್ ರೇವಣ್ಣ ಸಾಕ್ಷಿ ವೀಕ್ಷಣೆ ಮಾಡಲಿದ್ದಾರೆ ಎನ್ನಲಾಗಿದೆ.