ಉಡುಪಿ : ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ನಲ್ಲಿ ಕಳ್ಳತನ ನಡೆದಿದ್ದು ಮೇಲ್ಚಾವಣಿಗೆ ಹಾಕಿದ್ದ ತಾಮ್ರದ ಹೊದಿಕೆಯನ್ನು ಕಳ್ಳರು ಕದ್ದಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ನಲ್ಲಿ ಒಂದು ಕಳ್ಳತನ ನಡೆದಿದೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಒಂದು ಪರಶುರಾಮ್ ಥೀಮ್ ಪಾರ್ಕ್ ನಿರ್ಮಾಣಗೊಂಡಿತ್ತು. ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಈ ಒಂದು ಯೋಜನೆಯ ರೂಪುಗೊಂಡಿತ್ತು. ಇದೀಗ ಮೇಲ್ಚಾವಣಿಯಲ್ಲಿ ಇರುವಂತಹ ತಾಮ್ರದ ಹೊದಿಕೆಯನ್ನು ಕಳ್ಳರು ಕದ್ದಿದ್ದಾರೆ. ರಾಜಕೀಯ ಕೆಸರೆರಚಾಟಕ್ಕೆ ಥೀಮ್ ಪಾರ್ಕ್ ನೆನೆಗುದಿಗೆ ಬಿದ್ದಿದೆ ಎಂದು ಉಡುಪಿ ಜಿಲ್ಲಾ ಆಡಳಿತದ ವೈಫಲ್ಯಕ್ಕೆ ಇದೀಗ ಶಾಸಕ ವಿ.ಸುನಿಲ್ ಕುಮಾರ್ ಕಿಡಿ ಕಾರಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ ಇತಿಹಾಸದಲ್ಲೇ ಇದೊಂದು ದುರ್ದಿನ. ಸ್ಥಳೀಯ ಕಾಂಗ್ರೆಸ್ ಮುಖಂಡರ ದ್ವೇಷದಿಂದ ಹೀಗಾಗಿದೆ. ಎರಡು ವರ್ಷದಿಂದ ಥೀಮ್ ಪಾರ್ಕ್ ಯೋಜನೆಗೆ ಬಿಡಿಗಾಸು ಕೊಟ್ಟಿಲ್ಲ. ಅನುದಾನವಿಲ್ಲದೆ ಎರಡು ವರ್ಷಗಳಿಂದ ಥೀಮ್ ಪಾರ್ಕ್ ಪಾಳು ಬಿದ್ದಿದೆ. ಎಂದು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುನಿಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.








