ಬೆಂಗಳೂರು : ನಿನ್ನೆ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಡೆಸುತ್ತಿರುವ ಪರಿಶೀಲನ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದ್ದು 2022 ರಲ್ಲಿ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆಯಲ್ಲಿ ಆದ ಬಾಂಬ್ ಬ್ಲಾಸ್ಟಿಗೂ ಸಾಮ್ಯತೆ ಇದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೇಂದ್ರದ ಪ್ರಮುಖ ಹುದ್ದೆಗಳಿಗೆ 25 ಖಾಸಗಿ ವಲಯದ ತಜ್ಞರನ್ನು ನೇಮಿಸಲು ಮೋದಿ ಸರ್ಕಾರ ನಿರ್ಧಾರ
ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆಯಾ ಎಂದು ಇದೀಗ ಖಾಕಿ ಪಡೆ ಪರಿಶೀಲನೆ ನಡೆಸುತ್ತಿದೆ.ಎರಡಕ್ಕೂ ಸಾಮ್ಯತೆ ಇರುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ಸಾಮ್ಯತೆ ಇರುವ ಹಲವಾರು ಅಂಶಗಳು ಪತ್ತೆಯಾಗಿವೆ. ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ ಸ್ಪೋಟಕ ವಸ್ತುಗಳನ್ನು ಕೂಡ ಈ ಒಂದು ಸ್ಫೋಟದಲ್ಲಿ ಬಳಸಲಾಗಿದೆ. ಎರಡು ಕಡೆ ಬ್ಲಾಸ್ಟ್ ನಲ್ಲಿ ಒಂದೇ ಮಾದರಿ ಹೊಗೆ ಬಂದಿದ್ದು ಸ್ಫೋಟಕ್ಕೆ ಬ್ಯಾಟರಿ ಡಿಟೋನೇಟರ್, ನಟ್ಟು, ಬೋಲ್ಟ್, ಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
UPDATE : ರಾಮೇಶ್ವಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣ : ತಡರಾತ್ರಿ ಭೇಟಿ ನೀಡಿದ ‘ಕೇಂದ್ರ ಗುಪ್ತಚರ ಇಲಾಖೆ’
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಸ್ಫೋಟದ ರೂವಾರಿಯ ಶಾರಿಕ್ ವಿಚಾರಣೆಗೆ ಇದೀಗ ಪೊಲೀಸರು ಸಜ್ಜಾಗಿದ್ದಾರೆ. ಮಂಗಳೂರು ಸ್ಫೋಟದ ಆರೋಪಿ ಶಾರಿಕ್ ನನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.ಎಂದು ತಿಳಿದುಬಂದಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಶಾರಿಕ್ ಹಾಗೂ ಆತನ ಸಹಚರರನ್ನು ಕೂಡ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ನಾಳೆ ‘BBMP’ ವತಿಯಿಂದ ಪಲ್ಸ್ ಪೊಲಿಯೋ ಅಭಿಯಾನ : ನಗರದ 11.12 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ಅಲ್ಲದೆ ತಡರಾತ್ರಿ ಕೇಂದ್ರ ಗುಪ್ತಚರ ಇಲಾಖೆ ಭೇಟಿ ನೀಡಿದ್ದು ನೀಡಿದ್ದು ತೀವ್ರ ಶೋಧ ನಡೆಸುತ್ತಿದೆ. ಎಫ್ಎಸ್ಎಲ್ ಸೊಕೋ ಟೀಮ್ ಬಾಂಬ್ ಸ್ಕ್ವಾಡ್ನಿಂದಲೂ ಶೋಧ ನಡೆಯುತ್ತಿದೆ. ಐ ಎಸ್ ಡಿ ಎನ್ ಐ ಎ ಬಳಿಕ ಇದೀಗ ಐಬಿ ದಂಡೆವು ಭೇಟಿ ನೀಡಿದೆ. ತಡರಾತ್ರಿ ಕೆಫೆಯ ಇಂಚಿಂಚು ಜಾಗವನ್ನು ಶೋಧ ತಂಡಗಳು ಜಾಲಾಡಿವೆ ಎಂದು ತಿಳಿದುಬಂದಿದೆ.