ಕಲಬುರ್ಗಿ : ಕಲ್ಬುರ್ಗಿ ಜಿಲ್ಲಾಧಿಕಾರಿ ಬಹುಷಃ ಪಾಕಿಸ್ತಾನದಿಂದ ಬಂದಿರಬೇಕು ಎಂದು ಪ್ರತಿಭಟನೆ ವೇಳೆ ಬಿಜೆಪಿ ನೀಡಿದ್ದರು. ಈ ಒಂದು ಹೇಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕಲಬುರ್ಗಿಯಲ್ಲಿ ಬಿಜೆಪಿ ಎಂಎಲ್ಸಿ ರವಿಕುಮಾರ್ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ಕಲ್ಬುರ್ಗಿಯ ಡಿಸಿ ವಿರುದ್ಧ ರವಿಕುಮಾರ್ ಅವಹೇಳನಕಾರಿ ಹೇಳಿಕೆ ವಿಚಾರವಾಗಿ 2ನೇ ಬಾರಿಗೆ ಎಂಎಲ್ಸಿ ರವಿಕುಮಾರ್ ವಿಚಾರಣೆಗೆ ಹಾಜರಾಗಿದ್ದಾರೆ. ಕಲ್ಬುರ್ಗಿಯ ದಕ್ಷಿಣ ವಿಭಾಗದ ಎಸಿಪಿ ಕಚೇರಿಯಲ್ಲಿ ಬಿಜೆಪಿ ಎಂಎಲ್ಸಿ ರವಿಕುಮಾರ್ ಇದು ಈಗ ವಿಚಾರಣೆಗೆ ಹಾಜರಾಗಿದ್ದಾರೆ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಶರಣಪ್ಪ ಸುಬೇದಾರ್ ಅವರಿಂದ ರವಿಕುಮಾರ್ ವಿಚಾರಣೆ ನಡೆಯುತ್ತಿದೆ ಕಲ್ಬುರ್ಗಿಯ ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೆ ಎಂದು ಕಲಬುರ್ಗಿ ಚಲೋ ಕಾರ್ಯಕ್ರಮ ವೇಳೆ ರವಿಕುಮಾರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು.