ಬೆಂಗಳೂರು : ಇಂದು ರಾಜ್ಯ ಗುತ್ತಿಗೆದಾರರ ಸಂಘವು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಾಕಿ ಬಿಲ್ ಪಾವತಿಸುವಂತೆ ಮನವಿ ಮಾಡಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಮಿಷನ್ ಕೊಡೋದು ಅಪರಾಧ ತೆಗೆದುಕೊಳ್ಳುವುದು ಕೂಡ ಅಪರಾಧ. ಹಾಗಾಗಿ ಗುತ್ತಿಗೆದಾರರು ಕಮಿಷನ್ ಕೊಡೋದೇ ಬೇಡ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ಹೇಳಿದ ರೀತಿ ಆಗಲ್ಲ 30,000 ಕೋಟಿ ಬಾಕಿ ಇದೆ ಅದನ್ನು ಕೊಡಿ ಎಂದು ಕೇಳಿದ್ದಾರೆ. ಏಪ್ರಿಲ್ ನಲ್ಲಿ ಕೊಡೋಣ ಎಂದು ಹೇಳಿದ್ದೇನೆ. ಗುತ್ತಿಗೆದಾರ ನಿಯೋಗದಿಂದ ಕಮಿಷನ್ ಪಡೆಯುತ್ತಿರುವ ಆರೋಪ ವಿಚಾರವಾಗಿ ನಾನು ಕಮಿಷನ್ ಪಡೆದಿಲ್ಲ. ಯಾರಿಂದಲೂ ನಾನು ಹಣ ಕೇಳಿಲ್ಲ. ಬಾಕಿ ಬಿಲ್ ಉಳಿಸಿಕೊಂಡಿದ್ದು ಯಾರಿಂದ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದರು.
ಈ ಹಿಂದೆ ಬಜೆಟ್ ನಲ್ಲಿ ಹಣ ಇಡದೆ ಟೆಂಡರ್ ಕರೆದಿದ್ದಾರೆ. ಅದಕ್ಕೆ ನಾವು ಹೊಣೆನಾ? ಎಂದು ಪ್ರಶ್ನಿಸಿದರು.ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಕೊಡಬೇಕು ಅಲ್ಲವೇ? ಗುತ್ತಿಗೆದಾರರು ಕಮಿಷನ್ ಕೊಡೋದೇ ಬೇಡ. ಲಂಚ ಕೊಡೋದು ಅಪರಾಧ, ಜೊತೆಗೆ ತೆಗೆದುಕೊಳ್ಳುವುದು ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.