ಬಾಗಲಕೋಟೆ : ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷನ ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಮಾರ್ ಡಾಕಣ್ಣನವರ ಕೊಲೆಗೆ ಸುಪಾರಿ ಪಡೆದ ಆರೋಪದ ಅಡಿ ಇದೀಗ ಸುಪಾರಿ ಕೊಟ್ಟವ ಮತ್ತು ಸುಪಾರಿ ಪಡೆದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಸಾಂಗ್ಲಿ ಮೂಲದ ಅತುಲ್ ಜಾದವ್, ವಿನಾಯಕ್ ಪುಣೆಕರ್ ಹಾಗೂ ಜಹಾಂಗೀರ್ ಶೇಕ್ ನನ್ನು ಜಮಖಂಡಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಡಾಕಣ್ಣನವರ್ ಕೊಲೆಗೆ 10 ಲಕ್ಷ ರೂಪಾಯಿ ಸುಪಾರಿ ನೀಡಿರುವ ಆರೋಪ ಕೇಳಿ ಬಂದಿದ್ದು, ಜಹಾಂಗೀರ್ ಶೇಕ್ ನಿಂದ ಕೊಲೆಗೆ ಸುಪಾರಿ ನೀಡಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಮೂವರು ಆರೋಪಿಗಳನ್ನು ಸದ್ಯ ಪೋಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಕೊಲೆ ಸುಪಾರಿ ಕೊಟ್ಟರು ಎಂಬುವುದರ ಕುರಿತು ತನಿಖೆ ನಡೆಯುತ್ತಿದೆ.