ಉತ್ತರಕನ್ನಡ : ರಾಜಧಾನಿ ಬೆಂಗಳೂರು ಮಹಾನಗರ ಸೇರಿದಂತೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರದಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಕುಮಟಾ ತಾಲೂಕಿನ ಖೈರಾ ಕ್ರಾಸ್ ಬಳಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾಗಿದೆ.
ಹೌದು ಅಂಕೋಲ ಮತ್ತು ಶಿರಸಿ ಸಂಪರ್ಕಿಸುವ ಮಾರ್ಗದಲ್ಲಿ ಗುಡ್ಡ ಕುಸಿದಿದ್ದು, ಆತಂಕದಲ್ಲಿ ಜನರು ಇದ್ದಾರೆ. ಗುಡ್ಡದ ಆಸು ಪಾಸಿನ ನೀವಾಸಿಗಳು ಅಲ್ಲಿಂದ ಸ್ಥಳಾಂತರವಾಗಲು ಈಗಾಗಲೇ ಸೂಚನೆ ನೀಡಲಾಗಿದೆ. ಹೆದ್ದಾರಿ ಕುಸಿದಿದ್ದರೂ ಕೂಡ ವಾಹನಗಳು ನಿರ್ಲಕ್ಷ ವಹಿಸಿ ಅದೇ ಮಾರ್ಗದಲ್ಲಿಯೇ ಸಂಚರಿಸುತ್ತಿವೆ. ಸ್ಥಳೀಯರು ಮುಂದಾಗುವ ಅನಾಹುತ ತಪ್ಪಿಸಲು ಕಲ್ಲುಗಳನ್ನು ಇಟ್ಟಿದ್ದಾರೆ.
ಜೀವದ ಹಂಗು ತೊರೆದು ಸ್ಥಳೀಯರು ರಸ್ತೆಯನ್ನು ಬ್ಲಾಕ್ ಮಾಡಿದ್ದಾರೆ. ತಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಿರ್ಜಾನ್ ಮತ್ತು ಕಥಗಾಲ್ ರಸ್ತೆಯನ್ನು ಅಧಿಕಾರಿಗಳು ತಕ್ಷಣವೇ ಬಂದ್ ಮಾಡಿದ್ದಾರೆ. ಸುಮಾರು 18 ಕಿಲೋಮೀಟರ್ ಸುತ್ತಿಕೊಂಡು ಶಿರಸಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕುಮಟಾ ಮೂಲಕ ಶಿರಸಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.