ಬೆಂಗಳೂರು : ಮನೆಯ ಮುಂದಿನ ಮರ ಕಡಿಬೇಡ ಎಂದ ವ್ಯಕ್ತಿಯ ಮೇಲೆ ಮಚ್ಚಿನಿಂದ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಗೌಡ ಎಂಬಾತ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಶ್ರೀನಿವಾಸನಗರದಲ್ಲಿ ಈ ಒಂದು ಘಟನೆ ನಡೆದಿದೆ.
ಬಿಎಂಟಿಸಿ ನೌಕರ ಸುರೇಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಗೌಡನಿಂದ ಹಲ್ಲೆ ನಡೆದಿದೆ. ಬೆಂಗಳೂರಿನ ಸುಂಕದಕಟ್ಟೆಯ ಶ್ರೀನಿವಾಸನಗರದಲ್ಲಿ ಈ ಒಂದು ಕೃತ್ಯ ನಡೆದಿದೆ. ಮನೆ ಮುಂದೆ ಕಾರು ಹೋಗಲು ಜಾಗವಿಲ್ಲವೆಂದು ಮರ ಕಡಿಯಲು ಯತ್ನಿಸಲಾಗಿದೆ. ಮರವಿದ್ದರೆ ನೆರಳು ಕೊಡುತ್ತದೆ ಕಡಿಬೇಡಿ ಎಂದಿದ್ದ ಎದುರು ಮನೆಯ ಸುರೇಶ್.
ಸಿಟ್ಟಿಗೆದ್ದು ನೀನ್ಯಾರು ನನ್ನನ್ನು ಪ್ರಶ್ನಿಸಲು ಎಂದು ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಗೌಡ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮಚ್ಚಿನಿಂದ ಹಲ್ಲಿಗೆ ಒಳಗಾದ ಬಿಎಂಟಿಸಿ ನೌಕರ ಸುರೇಶ್ ಕೈ ಮತ್ತು ಕಿವಿ ಭಾಗದಲ್ಲಿ ಗಾಯಗಳಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಘಟನೆ ಸಂಭಂದ ಪ್ರಕರಣ ದಾಖಲಾಗಿದೆ.