ಬೆಂಗಳೂರು : ಬೆಂಗಳೂರಿನಲ್ಲಿ ಡಿಕೆ ಬ್ರದರ್ಸ್ ಹಾಗೂ ಆರ್ ಆರ್ ನಗರದ ಶಾಸಕ ಮುನಿರತ್ನ ನಡುವೆ ಇದೀಗ ತೀವ್ರ ಜಟಾಪಟಿ ಏರ್ಪಟ್ಟಿದ್ದು, ಮಲ್ಲತಹಳ್ಳಿ ಕೆರೆಗೆ ಬಿಡುಗಡೆಯಾದ ಹಣದ ಕುರಿತಾಗಿ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಇದೀಗ ಅಂಕಿ ಅಂಶಗಳ ಪ್ರತಿಗಳನ್ನು ಹಂಚಿ ಅಭಿಯಾನ ನಡೆಸುತ್ತಿದ್ದಾರೆ.
ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಇದೀಗ ಅಭಿಯಾನ ನಡೆಸಿದ್ದಾರೆ. ಲಗ್ಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ, ಕೊಟ್ಟಿಗೆಪಾಳ್ಯ ವಾರ್ಡ್ ಅಧ್ಯಕ್ಷ ಸುಂಕದಕಟ್ಟೆ ನವೀನ್ ಕುಶಾಲ್, ಹರವೇಗೌಡ ಸೇರಿದೆ ಹಲವು ಕಾರ್ಯಕರ್ತರು ಇದೀಗ ಶಾಸಕ ಮುನಿರತ್ನ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ.ಮಲ್ಲತಹಳ್ಳಿ ಕೆರೆಗೆ ಬಿಡುಗಡೆಯಾದ ಹಣದ ಅಂಕಿ ಅಂಶಗಳ ಪ್ರತಿ ವಿತರಣೆ ಮಾಡುತ್ತಿದ್ದಾರೆ.
ಅನುದಾನದ ಅಂಕಿ ಅಂಶಗಳ ಪ್ರತಿಯನ್ನು ಕಾಂಗ್ರೆಸ್ ಕಾರ್ಯಕರ್ತರು ಇದೀಗ ಹಂಚುತ್ತಿದ್ದಾರೆ. ಮಲ್ಲತಹಳ್ಳಿ ಕೆರೆಯ ಕುವೆಂಪು ಪಾರ್ಕಿನಲ್ಲಿ ಪ್ರತಿಗಳನ್ನು ಹಂಚಿ ಪ್ರತಿಭಟನೆ ಮಾಡುತ್ತಿದ್ದಾರೆ.ಮುನಿರತ್ನ ಕಾಲ್ಗುಣದಿಂದ ಮಲ್ಲತಹಳ್ಳಿ ಕೆರೆಗೆ ಬಂದಿದ್ದು 84 ಕೋಟಿ. ಕೆರೆ ಹಾಳು ಮಾಡಲು ಖರ್ಚು ಮಾಡಿದ್ದು ಅಬ್ಬಬ್ಬಾ ಅಂದ್ರೆ 10 ಕೋಟಿ. ಮಿಕ್ಕಿದ್ದೆಲ್ಲ ಎಲೆಕ್ಷನ್ ಟೈಮಲ್ಲಿ ಕೊಡ್ತಾರೆ ಕುಕ್ಕರ್, ಸೀರೆ, ಓಟಿ ಪ್ಯಾಕೆಟ್ ಇಷ್ಟೆಲ್ಲಾ ಲೂಟಿಯನ್ನು ಪ್ರಶ್ನಿಸುವುದೇ ಅಲ್ವಾ ನಮ್ಮ ಕೆಲಸ? ಎಂದು ಪ್ರಾಸ ಪದಗಳಿಂದ ಕೂಡಿದ ಪ್ರತಿಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಇದೀಗ ಹಂಚ್ಚುತ್ತಿದ್ದಾರೆ. ಅಂಕಿ ಅಂಶಗಳ ಸಮೇತ ದಾಖಲೆ ಪ್ರತಿಗಳನ್ನು ಹಂಚುತ್ತಿದ್ದಾರೆ.