ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಸಭೆ ಆಯುಕ್ತೆ ಅಮೃತ ಗೌಡಗೆ ಅಕ್ರಮವಾಗಿ ಕಟ್ಟಿದ್ದ ಬ್ಯಾನರ್ ತೆಗೆಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಿಂದನೆ ಮಾಡಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿದ್ದ. ಈ ವಿಚಾರವಾಗಿ ಸಚಿವ ಮುನಿಯಪ್ಪ ರಾಜೀವ್ ಗೌಡ ಪರ ಬ್ಯಾಟ್ ಬೀಸಿದ್ದು, ಆತ ಒಬ್ಬ ಸೌಮ್ಯ ಸ್ವಭಾವದವನು ಎಂದಿದ್ದಾರೆ.
ಆತನನ್ನು ಕರೆದು ಬುದ್ದಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿರುವವರಿಗೆ ಹೀಗೆ ಮಾತನಾಡಬಾರದು. ಕೂಲಂಕಷವಾಗಿ ಯೋಚಿಸಬೇಕು. ಹೀಗೆಲ್ಲ ಮಾತನಾಡಬಾರದು. ಜೆಡಿಎಸ್ನವರು ಹಿಂದೆ ಬ್ಯಾನರ್ ಹಾಕಿದಾಗ ಈ ಅಧಿಕಾರಿ ತೆಗೆದಿಲ್ಲ. ಈಗ ತೆಗೆದ್ರು ಎಂಬುದುರ ರಾಜೀವ್ ಗೌಡ ವಾದ. ಆದರೆ, ಹೀಗೆ ಮಾತನಾಡುವುದು ಅನಾಗರೀಕತೆ ಆಗುತ್ತದೆ. ಸುಸಂಸ್ಕೃತರು ಹೀಗೆಲ್ಲ ಮಾತನಾಡಬಾರದು ಎಂದರು.
ರಾಜೀವ್ ಗೌಡ ಹೇಳುವ ಪ್ರಕಾರ ಅವರ ಹಿನ್ನೆಲೆಯನ್ನು ನೋಡಿದಾಗ ಅವರ ಅಭಿಪ್ರಾಯದಲ್ಲಿ ಜೆಡಿಎಸ್ ಬ್ಯಾನರ್ ತೆಗೆಸಿರಲಿಲ್ಲ, ಜೆಡಿಎಸ್ನ ಪೋಸ್ಟರ್ ಬ್ಯಾನರ್ ತೆಗೆಯುತ್ತಿಲ್ಲ ಆ ಅಧಿಕಾರಿ. ಕೇವಲ ಕಾಂಗ್ರೆಸ್ನದ್ದು ಮಾತ್ರ ತೆಗೆದಿದ್ದಾರೆ ಎಂಬುದು ರಾಜೀವ್ ಗೌಡ ವಾದ. ರಾಜೀವ್ ಗೌಡ ಬಡವರಿಗೆ ಒಳ್ಳೆಯ ಕೆಲಸ ಮಾಡಿದ್ದಾನೆ. 10 ವರ್ಷದಲ್ಲಿ ಒಂದೇ ಒಂದು ದಿನ ಇಂಥ ಅಚಾತುರ್ಯ ಕಾಣಲಿಲ್ಲ. ಆದರೆ, ಈಗ ಭಾವನೆಗೆ ಒಳಗಾಗಿ ಹೀಗೆ ಮಾತನಾಡಿದ್ದಾನೆ, ಸರಿಯಲ್ಲ. ಏನೆಲ್ಲ ಮಾತನಾಡಿದ್ದಾರೆ ಸರಿಯಿಲ್ಲ ಎಂದರು.








