ಕುರುಕ್ಷೇತ್ರ : ಹರಿಯಾಣ ವಿಧಾನಸಭೆ ಚುನಾವಣೆ ರ್ಯಾಲಿಯಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ನಾಗಮಂಗಲದ ಗಲಭೆ ಪ್ರಸ್ತಾಪಿಸಿದ್ದು, ತುಷ್ಟಿಕರಣದ ಭರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಗಣೇಶೋತ್ಸವ ಆಚರಣೆಗೂ ಅಡ್ಡಿಪಡಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹರಿಯಾಣದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು, “ತುಷ್ಟೀಕರಣ” ರಾಜಕೀಯವನ್ನು ತನ್ನ “ಅತಿದೊಡ್ಡ ಗುರಿ” ಎಂದು ಆರೋಪಿಸಿದರು. ಕುರುಕ್ಷೇತ್ರದಲ್ಲಿ ಬೃಹತ್ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಮೋದಿ, ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟದ ವಿರುದ್ಧ ಪ್ರತಿಭಟನೆಯ ಮಧ್ಯೆ ಬೆಂಗಳೂರಿನಲ್ಲಿ ಗಣೇಶ ವಿಗ್ರಹವನ್ನು ಪೊಲೀಸರು ಕ್ಷಣಾರ್ಧದಲ್ಲಿ ವಶಪಡಿಸಿಕೊಂಡ ಘಟನೆಯನ್ನು ಉಲ್ಲೇಖಿಸಿದರು.
“ತುಷ್ಟೀಕರಣವೇ ಕಾಂಗ್ರೆಸ್ ನ ದೊಡ್ಡ ಗುರಿಯಾಗಿದೆ. ಇಂದು ಕಾಂಗ್ರೆಸ್ ಆಡಳಿತದ ರಾಜ್ಯವಾದ ಕರ್ನಾಟಕದಲ್ಲಿ ಗಣಪತಿಯನ್ನು ಸಹ ಜೈಲಿಗೆ ಹಾಕುವ ಪರಿಸ್ಥಿತಿ ಬಂದಿದೆ” ಎಂದು ಮೋದಿ ಹೇಳಿದರು.
ಘಟನೆ ಹಿನ್ನೆಲೆ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದನ್ನು ಖಂಡಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆರಂಭದಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಪ್ರತಿಭಟನೆಯ ಸಮಯದಲ್ಲಿ, ಪ್ರತಿಭಟನಾಕಾರರನ್ನು ಬಂಧಿಸುವಾಗ ಗಣಪತಿ ವಿಗ್ರಹವನ್ನು ಪೊಲೀಸ್ ಜೀಪಿಗೆ ಸ್ಥಳಾಂತರಿಸಲಾಗಿತ್ತು.








