ಬೆಂಗಳೂರು : ನಿನ್ನೆ ಬಿಹಾರ್ ಚುನಾವಣೆಯ ಫಲಿತಾಂಶ ಇಡೀ ದೇಶದಲ್ಲಿ ಕಾಂಗ್ರೆಸ್ ಕುಗ್ಗುವಂತೆ ಮಾಡಿದೆ. ಹಾಗಾಗಿ ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿ ಹಾಗೂ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು ಒಂದು ಕಡೆ ಈ ಫಲಿತಾಂಶ, ಡಿಕೆಶಿ ಟೀಮ್‌ಗಿದ್ದ ಅಧಿಕಾರ ಹಸ್ತಾಂತರ ಆಸೆಗೆ ತಣ್ಣೀರೆರಚಿದೆ. ಇನ್ನೊಂದು ಕಡೆ ಪುನಾರಚನೆ ಮಾಡಬೇಕೆಂಬ ಸಿಎಂ ಬೇಡಿಕೆಗೆ ಹೈಕಮಾಂಡ್ ಈಗಿನ ಸ್ಥಿತಿಯಲ್ಲಿ ಒಪ್ಪಿಗೆ ಕೊಡುತ್ತಾ ಅನ್ನೋ ಪ್ರಶ್ನೆಯೂ ಎದ್ದಿದೆ. ಹೈಕಮಾಂಡ್ ಸೋಲು ಸದ್ಯಕ್ಕೆ ಕರ್ನಾಟಕದಲ್ಲಿ ಬದಲಾವಣೆ ಪರ್ವಕ್ಕೆ ಕೈ ಹಾಕೋದಿಲ್ಲವಾ ಅನ್ನೋ ಚರ್ಚೆಗಳು ಪಕ್ಷದಲ್ಲೇ ಜೋರಾಗಿ ನಡೀತಿವೆ.
ಬಿಹಾರ ಫಲಿತಾಂಶ ರಾಜ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮುಂದೇನು ಅನ್ನೋ ಪ್ರಶ್ನೆ ಹುಟ್ಟಿಸಿದೆ. ಕಾಂಗ್ರೆಸ್ ಹೀನಾಯ ಸೋಲು ಕರ್ನಾಟಕದಲ್ಲಿ ಎದ್ದಿರೋ ಕ್ರಾಂತಿ ಬಿರುಗಾಳಿಗೆ ತಾತ್ಕಾಲಿಕ ಬ್ರೇಕ್ ಹಾಕುವ ಸಾಧ್ಯತೆ ತೋರಿಸಿದೆ. ಯಾಕೆಂದ್ರೆ ಈ ಸೋಲಿನಿಂದ ಕಾಂಗ್ರೆಸ್ ಹೈಕಮಾಂಡ್ ಶಕ್ತಿಗೆ ಭಾರೀ ಹಿನ್ನಡೆಯಾಗಿದೆ. ಹೀಗಾಗಿ ಕೈ ವರಿಷ್ಠರು ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕ ಕಾಂಗ್ರೆಸ್ ಗೊಂದಲಗಳ ಬಗ್ಗೆ ಮೌನವಹಿಸೋ ಸಾಧ್ಯತೆಯೇ ಹೆಚ್ಚಾಗಿದೆ.








