ಹಿರಿಯೂರು : ಹೊಸದುರ್ಗ ಶಾಸಕ ಬಿಜಿ. ಗೋವಿಂದಪ್ಪನವರ ಮೇಲೆ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಾಣಿ ವಿಲಾಸ ಸಾಗರ ಜಲಾಶಯ ಗೇಟ್ ಅನ್ನು ಹೊಸದುರ್ಗ ಶಾಸಕರು ತಾವೇ ಮುಂದೆ ನಿಂತು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಓಪನ್ ಮಾಡಿಸಿದ್ದು, ಈ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ ಹೋರಾಟಗಾರರು ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದ ಅವರು ಹೀಗೆ ಆದರೆ ಕಾನೂನು ಸುವ್ಯವಸ್ಥೆ ಮೇಲೆ ಹೊಡೆತ ಬೀಳಲಿದೆ.
ವಿವಿ ಸಾಗರ ಜಲಾಶಯ ರಾಜ್ಯ ಸರ್ಕಾರದ ಅಧೀನದಲ್ಲಿದ್ದು, ಜಿಲ್ಲಾಧಿಕಾರಿಗಳು ಜಲಾಶಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಜಲಾಶಯದ ಗೇಟ್ ತೆಗೆಸುವ, ಮುಚ್ಚುವ ಮತ್ತು ಅದಕ್ಕೆ ಸಂಬಂಧಪಟ್ಟಂತ ಕೆಲಸಗಳನ್ನು ಮಾಡಿಸುವ ಅಧಿಕಾರ ಜಿಲ್ಲಾಧಿಕಾರಿಗಳು ಹೊಂದಿದ್ದಾರೆ. ಆದರೆ ಶಾಸಕರು ತಾವೇ ಮುಂದೆ ನಿಂತು ಗೇಟ್ ಓಪನ್ ಮಾಡಿಸಿದ್ದು ಅತ್ಯಂತ ದುರದೃಷ್ಟಕರ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ಸಂದರ್ಭದಲ್ಲಿ ದೂರು ನೀಡಿರುವ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಸಮಿತಿ ನಿರ್ದೇಶಕರಾದ ಪಿಟ್ಲಾಲಿ ಶ್ರೀನಿವಾಸ್, ಆರ್.ಕೆ ಗೌಡ್ರು, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎ. ವಿ.ಕೊಟ್ಟಿಗೆ ಕೆ.ಜಿ ಗೌಡ್ರು, ಗ್ರಾಪಂ ಸದಸ್ಯೆ ಶಶಿಕಲಾ, ರುದೆಶ್ ಚಲುವಾದಿ. ಸತೀಶ್ ಮುಂತಾದವರಿದರು.








