ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಡುಬಿದ್ರಿಯಲ್ಲಿ ಕಾಂತಾರ ಸಿನಿಮಾದಲ್ಲಿ ನಡೆದಿರುವ ಘಟನೆ ನಡೆದಿದೆ.
ಹೌದು, 500 ವರ್ಷ ಇತಿಹಾಸ ಇರುವ ಈ ದೈವಸ್ಥಾನದಲ್ಲಿ ಎರಡು ಗುಂಪುಗಳನ್ನು ರಚನೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ವೇಳೇ, ಭಕ್ತ ಸಮಿತಿ ಮತ್ತು ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿದೆ. ಟ್ರಸ್ಟಿ ಜಯ ಪೂಜಾರಿ ಕೋರ್ಟ್ ಮೆಟ್ಟಿಲೇರಿದ ಮರುದಿನವೇ ಸಾವನ್ನಪ್ಪಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅವರ ಸಾವಿನ ಹಿನ್ನಲೆಯಲ್ಲಿ, ವಾರ್ಷಿಕ ನೇಮೋತ್ಸವವನ್ನು ಮುಂದೂಡಲಾಗಿದೆಯಂತೆ.
ಕಾಂತರ ಸಿನಿಮಾ ಶೈಲಿಯಲ್ಲಿ ಕೋರ್ಟ್ನಲ್ಲಿ ನೋಡಿಕೊಳ್ತೇನೆಂದ ದೂರುದಾರ ಸಾವಪ್ಪಿರುವ ಹಿನ್ನಲೆಯಲ್ಲಿ ಸ್ಥಳೀಯ ಜನತೆ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.