ಬೆಂಗಳೂರು : ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಆಗಿರಬಹುದು ಫೇಸ್ಬುಕ್ ಆಗಿರಬಹುದು ಹಲವು ಟ್ರೆಂಡಿಂಗ್ ಆಪ್ ಗಳಲ್ಲಿ ರಿಲ್ಸ್ ಮಾಡುವರನ್ನು ನೋಡಿದ್ದೇವೆ. ಅದೇ ರೀತಿಯಾಗಿ ಪೊಲೀಸ್ ಇಲಾಖೆಯಲ್ಲಿ ಕೂಡ ಹಲವರು ಸಮವಸ್ತ್ರದಲ್ಲಿ ರೀಲ್ಸ್ ಮಾಡಿ ಹರಿಬಿಡುವುದನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು ಇದೀಗ ಆ ರೀತಿ ಪೊಲೀಸ್ ಸಮವಸ್ತ್ರದಲ್ಲಿ ರಿಲೀಸ್ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಈಗ ರೀಲ್ಸ್ ಅಥವಾ ವಿಡಿಯೋಗಳನ್ನು ಮಾಡುವಂತದ್ದು ಹವ್ಯಾಸ, ಪ್ರವೃತ್ತಿ, ಚಟ ಇದೆಯೋ ಅದೇ ರೀತಿಯಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಅನೇಕ ಸಂದರ್ಭ ದಲ್ಲಿ ಈ ರೀತಿ ತಮ್ಮ ಕಲಾ ಪ್ರತಿಭೆಯನ್ನು ತೋರಿಸುವಂತಹ ಸಂದರ್ಭ ದಲ್ಲಿ ಸಮವಸ್ತ್ರದಲ್ಲಿ ಅನೇಕ ರೀಲ್ಸ್ ವಿಡಿಯೋ ಮಾಡಿದ್ದಾರೆ.
ಇದು ಒಂದು ರೀತಿಯಲ್ಲಿ ಇಲಾಖೆಗೆ ಶೋಭೆ ತರುವಂತಹ ವಿಷಯವಲ್ಲ. ಇದು ಗಮನಕ್ಕೆ ಬಂದಿರುವುದರಿಂದ ಈ ಕುರಿತು ಸುತ್ತೋಲೆ ಹೊರಡಿಸಿದ್ದೇನೆ. ಸಮಸ್ತಕ್ಕೆ ಅದರದೇ ಆದ ಗೌರವ ಪ್ರತಿಷ್ಠೆ ಹಾಗೂ ಸಮಾಜದಲ್ಲಿ ಅದರಗೆ ಆದಂತ ಒಂದು ಸ್ಥಾನ ಇದೆ. ಹಾಗಾಗಿ ಯಾರು ಕೂಡ ರೀಲ್ಸ್ ಮಾಡಬಾರದು.ಪೊಲೀಸ್ ಇಲಾಖೆ ಅಥವಾ ಸರ್ಕಾರ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಯಾವುದೇ ರೀತಿ ವಿಷಯಗಳ ಬಗ್ಗೆ ಅಧಿಕೃತ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಥವಾ ಮಾಧ್ಯಮಗಳಲ್ಲಿ ಹಾಕೋದು ತಪ್ಪು ಹಾಗಾಗಿ ಕುರಿತು ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದರು.