ಬೆಂಗಳೂರು : ನಾಳೆ 16ನೇ ಬಾರಿ ದಾಖಲೆ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದಲ್ಲಿ ವಿಶೇಷ ಸಂಪುಟ ಸಭೆಯಲ್ಲಿ ನಿಗದಿ ಮಾಡಿದ್ದೂ, ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆ ಅನುಮೋದನೆ ಪಡಿಸಲಿದ್ದಾರೆ. ಸಿದ್ಧರಾಮಯ್ಯ ನಾಳೆ ಬೆಳಗ್ಗೆ 10:15ಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಮಂಡಿ ನೋವಿನ ಮಧ್ಯೆಯೂ ಕೂಡ ಸಿಎಂ ಸಿದ್ದರಾಮಯ್ಯ ಬಜೆಟ್ಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಾರಿಯ ಬಜೆಟ್ ಮಾತ್ರ 4 ಲಕ್ಷ ಕೋಟಿ ಇರೋದು ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ರಾಜ್ಯದ ಜನರು ವಿಶೇಷ ಅನುದಾನದ ನಿರೀಕ್ಷೆಯಲ್ಲಿ ಇದ್ದಾರೆ. ಗ್ಯಾರಂಟಿಗೆ ಹಣಕಾಸು ಪರಿಸ್ಥಿತಿ ಸರಿದೂಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಪಂಚ ಗ್ಯಾರಂಟಿಗಳ ಯೋಜನೆಯಿಂದಾಗುವ 52 ಸಾವಿರ ಕೋಟಿ ರು. ಹೊರೆ ಯನ್ನು ಅಷ್ಟು ಸುಲಭವಾಗಿ ಕಡಿಮೆ ಮಾಡಲಾಗದು ಎನ್ನುವುದನ್ನು ಮನಗಂಡಿರುವ ಸಿದ್ದರಾಮಯ್ಯ ಅವರು, ಏಕಾಏಕಿ ಕಡಿವಾಣ ಹಾಕದೆ, ಇದಕ್ಕಾಗಿ ಇತರ ಮೂಲಗಳಿಂದ ಆದಾಯ ಕ್ರೋಢೀಕರಿಸುವ ಯೋಚನೆಯಲ್ಲಿದ್ದಾರೆ ಎಂದು ಅರ್ಥಿಕ ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ. ಈ ಬಾರಿ ವಿವಿಧ ತೆರಿಗೆ ಮೂಲಗಳಿಂದ ಸುಮಾರು 2 ಲಕ್ಷ ಕೋಟಿ ವರೆಗೂ ಸಂಗ್ರಹಿಸುವ ಲೆಕ್ಕಾಚಾರದಲ್ಲಿರುವ ಸಿದ್ದರಾಮಯ್ಯ ಅವರು, ಕೆಲವು ಸೆಸ್ ಮತ್ತು ಸಣ್ಣಪುಟ್ಟ ತೆರಿಗೆಗಳ ಹೆಚ್ಚಳಕ್ಕೂ ಕೈಹಾಕುವ ಸಂಭವವಿದೆ ಎಂದು ಮೂಲಗಳು ಹೇಳಿವೆ.
ಕಳೆದ ಬಾರಿ 3.71ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, ರಾಜಸ್ವ ವೆಚ್ಚ 2.90ಲಕ್ಷ ಕೋಟಿಗೂ ಅಧಿಕವಾಗಿ, ಬಂಡವಾಳ ವೆಚ್ಚ ಕೇವಲ 55ಸಾವಿರ ಕೋಟಿಗೆ ಇಳಿದಿತ್ತು. ಇದರ ಮಧ್ಯೆ, ಕೇಂದ್ರ ಸರಕಾರದಿಂದ ಲಭಿಸಬೇಕಿದ್ದ ರಾಜ್ಯದ ತೆರಿಗೆ ಪಾಲು, ಜಿಎಸ್ ಟಿ ಹಂಚಿಕೆ ಕೊರತೆಯಿಂದ ರಾಜ್ಯದಲ್ಲಿ ಆದಾಯ ಕೊರತೆಯಾಗಿತ್ತು, ಬದಲಾಗಿ ಯೋಜನೆಗಳಿಗೆ ಬಂಡವಾಳ ಹೂಡಿಕೆ ವೆಚ್ಚಗಳು ಕಷ್ಟವಾಗಿತ್ತು. ಇದರೊಂದಿಗೆ ಕೇಂದ್ರ ದಿಂದ ನಿರೀಕ್ಷೆ ಮಾಡಿದ್ದ ವಿಶೇಷ ಅನುದಾನ ಕೂಡ ಕೈ ತಪ್ಪಿತ್ತು.