ಬೆಳಗಾವಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾರೂ ಕೂಡ ಬಾಯಿ ಬಿಡಬಾರದು ಎಂದು ಹೈಕಮಾಂಡ್ ಕಾಂಗ್ರೆಸ್ ಶಾಸಕರಿಗೆ ಸಚಿವರುಗಳಿಗೆ ಖಡಕ್ ಸಂದೇಶ ನೀಡಿತ್ತು. ಆದರೂ ಕೂಡ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಕಳೆದ ಕೆಲವು ದಿನಗಳಿಂದ ನಾಯಕತ್ವ ಬದಲಾವಣೆ ಇಲ್ಲ ಅಂತ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಯತೀಂದ್ರ ಹೇಳಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹೈಕಮಾಂಡ್ ಪ್ರತಿಯೊಬ್ಬರಿಗೂ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಬೇಡಿ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ. ಆದರೆ ಯತೀಂದ್ರ ಅವರಿಗೆ ಯಾಕೆ ಏನು ಹೇಳುತ್ತಿಲ್ಲ ಅಂತ ಕಿಡಿ ಕಾರಿದ್ದಾರೆ.
ಇದೀಗ ಸಿಎಂ ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ಬೆಳಗಾವಿಯ ಸರ್ಕ್ಯೂಟ್ ಹೌಸ್ ಗೆ ಬುಲಾವ್ ನೀಡಿದ್ದಾರೆ. ಹಾಗಾಗಿ ಯತಿಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸರ್ಕ್ಯೂಟ್ ಹೌಸ್ ಗೆ ತೆರಳಿದ್ದು ಕಳೆದ ಒಂದು ಗಂಟೆಯಿಂದ ಸುದೀರ್ಘವಾಗಿ ತಂದೆ ಹಾಗೂ ಮಗನ ನಡುವೆ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಯತೀಂದ್ರ ಜೊತೆಗೆ ಚರ್ಚೆ ಬಳಿಕ ಹೈಕಮಾಂಡ್ ಏನು ಹೇಳುತ್ತದೆ ಹಾಗೆ ಕೇಳುತ್ತೇವೆ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದರು.








