Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್-ಇಸ್ರೇಲ್ ಯುದ್ಧದಿಂದ ಭಾರತಕ್ಕೆ ಎಷ್ಟು ನಷ್ಟ.? ಯಾರಿಗೆ ಲಾಭ ಗೊತ್ತಾ.? ಮಾಹಿತಿ ಇಲ್ಲಿದೆ!

01/03/2026 6:10 AM

BIG NEWS : ಇಸ್ರೇಲ್-ಇರಾನ್ ಸಂಘರ್ಷ : ಕನ್ನಡಿಗರ ಸುರಕ್ಷತೆಗೆ ಸರ್ಕಾರ ಬದ್ಧ : CM ಸಿದ್ದರಾಮಯ್ಯ

01/03/2026 6:10 AM

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

01/03/2026 6:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ
KARNATAKA

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

By kannadanewsnow5701/03/2026 6:03 AM

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರ ದೀರ್ಘಕಾಲದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 12 ರಿಂದ 15% ರಷ್ಟಿದ್ದ ಸಾಕ್ಷರತೆ ಪ್ರಮಾಣ ಪ್ರಸ್ತುತ 74% ತಲುಪಿದೆ. ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗುಣಮಟ್ಟದ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ದೊರಕುತ್ತಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಶಿಕ್ಷಕರ ತಪ್ಪಲ್ಲ, ಪಟ್ಟಭದ್ರ ವ್ಯವಸ್ಥೆಯ ಪರಿಣಾಮವಾಗಿ ಜಾತಿ ಎನ್ನುವುದು ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವುದರಿಂದ ಶಿಕ್ಷಣದಲ್ಲಿ ನಿರೀಕ್ಷಿಸಿದಷ್ಟು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ ಎಂದರು.

ಸಂವಿಧಾನವು ಒಬ್ಬ ವ್ಯಕ್ತಿ ಜವಾಬ್ದಾರಿಯುತವಾಗಿ ವಿಕಾಸವಾಗಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ದೊರೆಯಬೇಕೆಂದು ಸ್ಪಷ್ಟವಾಗಿ ಹೇಳುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ, ಮೌಢ್ಯ, ಕಂದಾಚಾರಗಳಿಂದ ಸಮಾಜ ಕೂಡಿದ್ದು, ಇವುಗಳನ್ನು ದೂರ ಮಾಡುವ ಶಿಕ್ಷಣ ಪಡೆಯುವುದು ಅತ್ಯಂತ ಅಗತ್ಯ.ಅಸಮಾನತೆಯಿಂದ ಕೂಡಿರುವ ಸಮಾಜದಲ್ಲಿ ಮುಖ್ಯವಾಹಿನಿಗೆ ಎಲ್ಲರೂ ಬರಬೇಕೆಂದರೆ ಸಮಾಜದಲ್ಲಿ ಬದಲಾವಣೆಯಾಗಬೇಕು ಎಂದು ಹೇಳಿದ್ದಾರೆ.

ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ವೈಚಾರಿಕತೆ ಮತ್ತು ವೈಜ್ಞಾನಿಕ ಶಿಕ್ಷಣ ನೀಡಲು ಶಿಕ್ಷಕರಿಂದ ಮಾತ್ರ ಸಾಧ್ಯ. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಬುದ್ಧಿ, ಕರುಣೆ ಮತ್ತು ಕೌಶಲ್ಯ ಮಿಳಿತವಾದಾಗ ಮಾತ್ರ ವಿಕಾಸ ಸಾಧ್ಯ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಅತ್ಯಂತ ಹೆಚ್ಚು ಗೌರವಿಸುತ್ತೇನೆ. ಅವರ ಕಾರಣದಿಂದಲೇ ನಾನಿಂದು ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದಿದ್ದು.

ಶಿಕ್ಷಕರ ಹಲವಾರು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಹಿಂದೆ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ 5 ವರ್ಷಗಳಲ್ಲಿ ಒಂದು ಲಕ್ಷ ಶಿಕ್ಷಕರನ್ನು ನೇಮಕ ಮಾಡಿದ್ದೆ. 6 ಮತ್ತು 7ನೇ ವೇತನ ಆಯೋಗವನ್ನು ಜಾರಿ ಮಾಡಿದ್ದು ನಾನೆ. ಉಳಿದ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಒಪಿಎಸ್ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ. ವೇತನ ಬಡ್ತಿ ನೀಡಲು ಪ್ರಯತ್ನ ಮಾಡಲಾಗುವುದು.

ಶಿಕ್ಷಕರ ನಡವಳಿಕೆ ಉತ್ತಮವಾಗಿರಬೇಕು. ಎಲ್ಲಾ ಮಕ್ಕಳಿಗೂ ವೈಚಾರಿಕತೆ , ವೈಜ್ಞಾನಿಕತೆಯುಳ್ಳ ಶಿಕ್ಷಣ ನೀಡಿದರೆ ಸುಭದ್ರ, ಸುಂದರ ಸಮಾಜ, ದೇಶವನ್ನು ಕಟ್ಟಬಹುದು. ರಾಷ್ಟ್ರದ ಭವಿಷ್ಯವನ್ನು ರೂಪಿಸುವಂಥ ಮಕ್ಕಳನ್ನು ತಯಾರು ಮಾಡುವುದು ನಿಮ್ಮ ಗುರಿಯಾಗಲಿ ಎಂದು ಹೇಳಿದ್ದಾರೆ.

ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವವರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ 12 ರಿಂದ 15% ರಷ್ಟಿದ್ದ ಸಾಕ್ಷರತೆ ಪ್ರಮಾಣ ಪ್ರಸ್ತುತ 74% ತಲುಪಿದೆ. ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗುಣಮಟ್ಟದ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಶಿಕ್ಷಣ ದೊರಕುತ್ತಿದೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಇದು ಶಿಕ್ಷಕರ ತಪ್ಪಲ್ಲ, ಪಟ್ಟಭದ್ರ ವ್ಯವಸ್ಥೆಯ… pic.twitter.com/NKs2C519rP

— Siddaramaiah (@siddaramaiah) February 28, 2026

BIG NEWS: CM Siddaramaiah promises action to reinstate old pension for state government employees
Share. Facebook Twitter LinkedIn WhatsApp Email

Related Posts

BIG NEWS : ಇಸ್ರೇಲ್-ಇರಾನ್ ಸಂಘರ್ಷ : ಕನ್ನಡಿಗರ ಸುರಕ್ಷತೆಗೆ ಸರ್ಕಾರ ಬದ್ಧ : CM ಸಿದ್ದರಾಮಯ್ಯ

01/03/2026 6:10 AM1 Min Read

67 ವರ್ಷಗಳಿಂದ ನಗದ ಜೀವಂತ ರತಿ-ಮನ್ಮಥರು: ಈ ಬಾರಿ ನಗಿಸಿದರೆ ಸಿಗಲಿದೆ ₹13 ಲಕ್ಷ ಬಹುಮಾನ !

01/03/2026 5:54 AM1 Min Read

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

01/03/2026 5:45 AM2 Mins Read
Recent News

ಇರಾನ್-ಇಸ್ರೇಲ್ ಯುದ್ಧದಿಂದ ಭಾರತಕ್ಕೆ ಎಷ್ಟು ನಷ್ಟ.? ಯಾರಿಗೆ ಲಾಭ ಗೊತ್ತಾ.? ಮಾಹಿತಿ ಇಲ್ಲಿದೆ!

01/03/2026 6:10 AM

BIG NEWS : ಇಸ್ರೇಲ್-ಇರಾನ್ ಸಂಘರ್ಷ : ಕನ್ನಡಿಗರ ಸುರಕ್ಷತೆಗೆ ಸರ್ಕಾರ ಬದ್ಧ : CM ಸಿದ್ದರಾಮಯ್ಯ

01/03/2026 6:10 AM

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

01/03/2026 6:03 AM

67 ವರ್ಷಗಳಿಂದ ನಗದ ಜೀವಂತ ರತಿ-ಮನ್ಮಥರು: ಈ ಬಾರಿ ನಗಿಸಿದರೆ ಸಿಗಲಿದೆ ₹13 ಲಕ್ಷ ಬಹುಮಾನ !

01/03/2026 5:54 AM
State News
KARNATAKA

BIG NEWS : ಇಸ್ರೇಲ್-ಇರಾನ್ ಸಂಘರ್ಷ : ಕನ್ನಡಿಗರ ಸುರಕ್ಷತೆಗೆ ಸರ್ಕಾರ ಬದ್ಧ : CM ಸಿದ್ದರಾಮಯ್ಯ

By kannadanewsnow5701/03/2026 6:10 AM KARNATAKA 1 Min Read

ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ…

BIG NEWS : ರಾಜ್ಯದ ಸರ್ಕಾರಿ ನೌಕರರಿಗೆ `ಹಳೆಯ ಪಿಂಚಣಿ ಮರು ಜಾರಿ’ಗೆ ಕ್ರಮ: CM ಸಿದ್ದರಾಮಯ್ಯ ಭರವಸೆ

01/03/2026 6:03 AM

67 ವರ್ಷಗಳಿಂದ ನಗದ ಜೀವಂತ ರತಿ-ಮನ್ಮಥರು: ಈ ಬಾರಿ ನಗಿಸಿದರೆ ಸಿಗಲಿದೆ ₹13 ಲಕ್ಷ ಬಹುಮಾನ !

01/03/2026 5:54 AM

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

01/03/2026 5:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.