ಬೆಂಗಳೂರು : ವಿಷ್ಣುವರ್ಧನ್ ಅವರ ಅಭಿನವ್ ಸ್ಟುಡಿಯೋದಲ್ಲಿನ ಸಮಾಧಿ ಕೆಡವಿದ್ದಾರೆ. ಸ್ಮಾರಕ ನಿರ್ಮಾಣಕ್ಕಾಗಿ 10 ಗುಂಟೆ ಜಾಗ ನೀಡುವಂತೆ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಅಭಿಮಾನಿಗಳ ಮನವಿಯನ್ನೂ ಅವರು ಮುಂದಿಟ್ಟಿದ್ದಾರೆ.
ಇಂದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರೋ ವಿಷ್ಣುವರ್ಧನ್ ಸಮಾಧಿ ಕೆಡವಿದ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಸ್ಟುಡಿಯೋದ 10 ಗುಂಟೆ ಜಾಗವನ್ನು ತಮಗೆ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ಭಾರತಿ ವಿಷ್ಣುವರ್ಧನ್ ಅವರು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವಿಷ್ಣು ಅಳಿಯ ಅನಿರುದ್ಧ್ ಜತ್ಕರ್ ಕೂಡ ಈ ಸಂದರ್ಭದಲ್ಲಿ ಇದ್ದರು.
ಅಭಿಮಾನಿಗಳಿಗಾಗಿ ಸ್ಟುಡಿಯೋದಲ್ಲಿ ಜಾಗ ಕೊಡಿ ಎಂದು ಸಿಎಂ ಬಳಿ ಕೇಳಿದ್ದೇವೆ. ಅಭಿಮಾನಿಗಳ ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಮಾಡಿ ಕೊಡಬೇಕು ಎಂಬುದು ನಮ್ಮ ಮನವಿ ಎಂದಿದ್ದಾರೆ. ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ಕೊಡಬೇಕು ಎಂಬುದು ಹಲವು ವರ್ಷಗಳ ಕೋರಿಕೆ. ಅಭಿಮಾನಿಗಳ ಪರವಾಗಿ ಭಾರತಿ ಕೂಡ ಈ ರೀತಿಯ ಮನವಿ ಮಾಡಿದ್ದಾರೆ. ಕರ್ನಾಟಕ ರತ್ನ ಕೊಡಬೇಕು ಎಂದು ನಾನು ಕೇಳುವುದಿಲ್ಲ. ಅಭಿಮಾನಿಗಳು ಕೇಳುತ್ತಿದ್ದಾರೆ. ಅವರ ಕೋರಿಕೆಯನ್ನು ಈಡೇರಿಸಬೇಕು ಎಂದು ಭಾರತಿ ಸಿಎಂ ಬಳಿ ಹೇಳಿದ್ದಾರೆ.