ಬೆಳಗಾವಿ : ರಾಜ್ಯದಲ್ಲಿ ಡಾಬಾ ಪಾನ್ ಶಾಪ್ ನಲ್ಲೂ ಕೂಡ ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತಿದೆ. ರಾಜ್ಯದ 6ನೇ ಗ್ಯಾರಂಟಿ ಕುಡುಕರ ರಾಜ್ಯ ಎಂದು ಘೋಷಣೆ ಮಾಡಿ. ಸಿಎಂ ಸಿದ್ದರಾಮಯ್ಯ ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಬಿ ವೈ ವಿಜಯೇಂದ್ರ ಸರ್ಕಾರದ ವಿರುದ್ಧ ಜನ ದಂಗೆ ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಎರಡು ತಿಂಗಳ ಕಂತು 5 ಸಾವಿರ ಕೋಟಿ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಸಿಎಂ ಸಿದ್ದರಾಮಯ್ಯ ಸದನಕ್ಕೆ ಸಮರ್ಪಕವಾಗಿ ಉತ್ತರ ಕೊಡಬೇಕಿತ್ತು 5,000 ಕೋಟಿಯ ಬಗ್ಗೆ ಏನು ಅವ್ಯವಹಾರ ಆಗಿದೆ ಗೊತ್ತಿಲ್ಲ ಗ್ಯಾರಂಟಿ ಗಳಿಗೆ ಹಣ ಸಂಗ್ರಹಿಸುವುದೇ ದೊಡ್ಡ ಸವಾಲಾಗಿದೆ ಎಂದು ಕಿಡಿ ಕಾರಿದರು.








