ಬೆಂಗಳೂರು : ಬೆಂಗಳೂರಲ್ಲಿ ಕೋಗಿಲು ಲೇಔಟ್ ಅಕ್ರಮ ಮನೆಗಳ ತೆರವು ವಿಚಾರವಾಗಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕೊಡುವ ನಿರ್ಧಾರವೇ ಅಕ್ರಮವಾಗಿದೆ. ರಾಜ್ಯದ ಹಿತಾಸಕ್ತಿಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಬೇಕು. ಯಾರದ್ದೋ ಮಾತು ಕೇಳಿ ಮನಸೋ ಇಚ್ಛೆ ತೀರ್ಮಾನ ಸಾಧ್ಯವೇ? ಕೆಸಿ ವೇಣುಗೋಪಾಲ ಬೆದರಿಕೆ ಬೆನ್ನೆಲೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಉಲ್ಟಾ ಹೊಡೆದರು. ಅಕ್ರಮ ವಲಸಿಗರಿಗೆ ಮನೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದರು.
ಬೆಳಗಾವಿಯಲ್ಲಿ ಮಾತನಾಡಿದ ವಿಜಯೇಂದ್ರ, ನಿಯಮಗಳಿಗೆ ತೋರಿ ಹೊಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ. ಕಾನೂನು ವಿರುದ್ಧವಾಗಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಂಡಿದ್ದಾರೆ ಅತೀ ವೃಷ್ಟಿಯಿಂದ ಹಾನಿಯಾಗಿದೆ ರೈತರು ಪರಿಹಾರ ನಿರೀಕ್ಷೆಯಲ್ಲಿದ್ದರು ಪರಿಹಾರ ಘೋಷಿಸದೆ ಕೇಂದ್ರ ಸರ್ಕಾರದತ್ತ ಸಿಎಂ ಸಿದ್ದರಾಮಯ್ಯ ಬೊಟ್ಟು ಮಾಡಿದರು. ಪರಿಹಾರ ಕೊಡಿ ಅಂದರೆ ಪ್ರಧಾನಿಗೆ ಪತ್ರ ಬರೆದಿದ್ದೆ ಸಿಎಂ ಸಿದ್ದರಾಮಯ್ಯ ಸಾಧನೆ ಆಗಿದೆ.
ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಅಕ್ರಮ ವಲಸಿಗರಿಗೆ ಮನವಿ ಕೊಟ್ಟು ಸಿಎಂ ಅನ್ಯಾಯ ಮಾಡಿದ್ದಾರೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಕೆಸಿ ವೇಣುಗೋಪಾಲ್ ಅಣತಿಯಂತೆ ಕುಣಿಯುತ್ತಿದ್ದಾರೆ ವೇಣುಗೋಪಾಲ್ ಹೇಳಿದಂತೆ ಸಿಎಂ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ. ಕೋಗಿಲು ಬಡಾವಣೆಯಲ್ಲಿ ಕೇರಳದ ಅಕ್ರಮ ವಲಸಿಗರು ನೆಲೆಸಿದ್ದರು. ಅಕ್ರಮ ವಲಸಿಗರ ಮನೆಗಳನ್ನು ಈ ಸರ್ಕಾರ ನೆಲಸಮ ಮಾಡಿತು.
ನಂತರ ಈ ಪ್ರಕರಣ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹೇಳಿಕೆ ನೀಡಿದರು. ಬಳಿಕ ಕೆ ಸಿ ವೇಣುಗೋಪಾಲ್ ಬೆದರಿಕೆ ಹಾಕುವ ಕೆಲಸ ಮಾಡಿದರು ಸಿಎಂ ಡಿ ಸಿ ಎಂ ಗೆ ಬೆದರಿಕೆ ಹಾಕುವ ಕೆಲಸ ಮಾಡಿದರು ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ವೇಣುಗೋಪಾಲ ಬೆದರಿಕೆ ಬೆನ್ನೆಲೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಉಲ್ಟಾ ಹೊಡೆದರು. ಅಕ್ರಮ ವಲಸಿಗರಿಗೆ ಮನೆ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.








