ಬೆಂಗಳೂರು : ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೆರಿಗೆ ವಂಚನೆ ಮಾಡುತ್ತಿದೆ. 4.50 ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗುತ್ತಿದೆ. 60 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ ಅಂತಾರೆ. ಮೋದಿ ಸಿಎಂ ಆಗಿದ್ದಾಗ ಆಡಿದ ಮಾತಿಗೆ ಬದ್ಧವಾಗಿರಬೇಕು ಅಲ್ವೇ? ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ತೆರಿಗೆ ವಂಚನೆ ಕುರಿತು ಮಾತನಾಡಿದ ಅವರು, ಸೆಸ್ ಹಾಗೂ ಸರ್ಚಾರ್ಜ್ ಕೂಡ ಸಂಗ್ರಹ ಮಾಡುತ್ತಾರೆ. ಅದರಲ್ಲಿ ಪಾಲು ಕೊಡುವುದಿಲ್ಲ. ನಾವು ಕೂಡ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ವಿ. ದಕ್ಷಿಣ ಭಾರತದ ರಾಜ್ಯಗಳು ಧರಣಿ ಮಾಡಬೇಕಾಗಿದೆ. 15ನೇ ಹಣಕಾಸು ಆಯೋಗದ ಪ್ರಕಾರ ಹಣ ಬೇಕು. 11 ಸಾವಿರ ಕೋಟಿ ನ್ಯಾಯಯುತವಾಗಿ ಕೊಡಬೇಕು.
ಭದ್ರಾ ಮೇಲ್ದಂಡೆ ಯೋಜನೆಗೂ ಸಹ ಹಣ ಬಂದಿಲ್ಲ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗಲೂ ರಾಜ್ಯಕ್ಕೆ ಅನ್ಯಾಯ ಆಗಿದೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.