ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ 40 ಶೇಕಡ ಕಮಿಷನ್ ಆರೋಪದ ಕುರಿತು ತನಿಖೆ ನಡೆಸಲು ನೇಮಿಸಲಾಗಿದ್ದ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ವಿಚಾರಣಾ ಆಯೋಗ, ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಈ ವಿಚಾರವಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ 40 ಪರ್ಸೆಂಟ್ ಕಮಿಷನ್ ನಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರು ಈಗ 60 ರಿಂದ 80 ಪರ್ಸೆಂಟ್ ದಾಟಿದೆ ಎಂದು ಹೇಳುತ್ತಿದ್ದಾರೆ ಮಾನ್ಯ ಮುಖ್ಯಮಂತ್ರಿಗಳೇ ಅಂಗೈ ಹುಣ್ಣಿಗೆ ಕನ್ನಡಿ ಬೇಡ 60% ಕಮಿಷನಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಹೋಗುತ್ತಿದೆ? ಇದು ನಮ್ಮ ಆರೋಪವಲ್ಲ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ NOC ಗೆ 20% ಕೊಡಬೇಕು. ದಲ್ಲಾಳಿ ಅಧಿಕಾರಿಗಳಿಗೆ ಎಷ್ಟು ಪರ್ಸೆಂಟ್ ಕೊಡಬೇಕು? ನೀವು ಪ್ರಾಮಾಣಿಕರಾಗಿದ್ದರೆ ಕ್ರಮ ಕೈಗೊಳ್ಳಿ. 40% ಕಮಿಷನ್ ವಿರುದ್ಧ ಕ್ರಮ ಕೈಗೊಳ್ಳದಂತೆ ನಿಮ್ಮನ್ನು ಯಾರು ತಡೆದಿದ್ದಾರೆ? ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಿ.
ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳುತ್ತಿದ್ರಿ 40% ಕಮಿಷನ್ ಉಳಿಸಿ ಗ್ಯಾರಂಟಿಗೆ ಕೊಡುತ್ತೇವೆ ಅಂತ ಹೇಳಿದ್ರಿ ಹಾಗಾದರೆ ಇವರು ಯಾಕೆ 1 ಲಕ್ಷ ಕೋಟಿ ಸಾಲ ಮಾಡಿದ್ರಿ? 16 ವಸ್ತುಗಳ ಬೆಲೆಯನ್ನು ಯಾಕೆ ಹೆಚ್ಚಳ ಮಾಡಿದ್ದೀರಿ? ಕಸದ ಸಮಸ್ಯೆ ತಲೆದೋರದಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೂಚನೆ ನೀಡಬೇಕು ಇದು ಬ್ರಾಂಡ್ ಬೆಂಗಳೂರು ಅಥವಾ ಗಾರ್ಬೇಜ್ ಬೆಂಗಳೂರು ಅಥವಾ ಕರೆಕ್ಟ್ ಬೆಂಗಳೂರು ಎಂಬುದನ್ನು ಡಿಸಿಎಂ ಹೇಳಬೇಕು ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ ಟಿ ರವಿ ತಿಳಿಸಿದರು.