ಹಾಸನ : ಮಕ್ಕಳ ಗಲಾಟೆಯ ವಿಚಾರಕ್ಕೆ ದೊಡ್ಡವರ ನಡುವೆ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮುಜಾವರ್ ಮೊಹಲ್ಲಾದಲ್ಲಿ ಗಾಯಗೊಂಡಿದ್ದ ತೌಫಿಕ್ (28) ಸಾವನಪ್ಪಿದ್ದಾನೆ.
ಹಾಸನ ಜಿಲ್ಲೆಯ ಅರಸೀಕೆರೆಯ ಮುಜಾವರ್ ಮೊಹಲ್ಲಾ ಎಂಬಲ್ಲಿ ಒಂದು ಘಟನೆ ನಡೆದಿದೆ ಖಾಸಗಿ ಶಾಲೆಯಲ್ಲಿ ತೌಫಿಕ್ ಹಾಗು ಫರ್ಹನ ಇಬ್ಬರು ಮಕ್ಕಳು ಓದುತ್ತಿದ್ದರು. ಶಾಲೆಯಲ್ಲಿ ಮಕ್ಕಳು ಏನೋ ಸಣ್ಣ ವಿಚಾರವಾಗಿ ಗಲಾಟೆ ಮಾಡಿದ್ದಾರೆ ಇದು ಪೋಷಕರವರೆಗೂ ಹೋಗಿದೆ.
ಖಾಸಗಿ ಶಾಲೆಯ ಬಳಿ ತೌಫಿಕ್ ಮತ್ತು ಫರಾನ್ ಗಲಾಟೆ ಮಾಡಿದ್ದಾರೆ. ಆಗಸ್ಟ್ 25ರಂದು ಕ್ಷುಲ್ಲಕ ಕಾರಣಕ್ಕೆ ಶಾಲೆಯ ಬಳಿ ಗಲಾಟೆ ಮಾಡಿದ್ದಾರೆ. ಬಿಹೆಚ್ ರಸ್ತೆಯ ಲಸ್ಸಿ ಶಾಪ್ ನಲ್ಲಿ ನಡುವೆ ಗಲಾಟೆ ಅಗಲ ಆಗಿದ್ದು ಮಕ್ಕಳ ಜಗಳದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ ಗಲಾಟೆ ಅತಿರೇಕಕ್ಕೆ ತಿರುಗಿ ತೌಫಿಕ್ ನನ್ನು ತಳ್ಳಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ತೌಫಿಕ್ ನಿನ್ನೆ ರಾತ್ರಿ ಮೃತಾಪಟ್ಟಿದ್ದಾನೆ.
ಇದರಿಂದ ತೌಫಿಕ್ ಸಂಬಂಧಿಕರು ನಿನ್ನೆ ರಾತ್ರಿ ಫರ್ಹನ್ ಮನೆಗೆ ನುಗ್ಗಿ ಸಂಬಂಧಿಕರು ದಾಂದಲೆ ಮಾಡಿದ್ದಾರೆ ಮನೆ ಜಖಮ್ ಗೊಳಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ ಗಲಾಟೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ಮಾಡಲಾಗಿದೆ. ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.