Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ, ಡಿಕೆ ಶಿವಕುಮಾರ್ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ

03/03/2026 1:53 PM

ಮಗುವಿನ ಖಾಸಗಿ ಭಾಗಕ್ಕೆ ಹಾನಿ ಮಾಡುವುದು ಕೂಡ ಅತ್ಯಾಚಾರ : ಕೇರಳ ಹೈಕೋರ್ಟ್ ಐತಿಹಾಸಿಕ ತೀರ್ಪು

03/03/2026 1:42 PM

ಸಾಲದ `EMI’ ಪಾವತಿ ತಪ್ಪಿದ್ದಲ್ಲಿ ನಿಮಗಾಗುವ ನಷ್ಟಗಳೇನು? ಇಲ್ಲಿವೆ ಮುಖ್ಯ ಮಾಹಿತಿ

03/03/2026 1:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಏ.16,17ರಂದು `CET’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ.!
KARNATAKA

BIG NEWS : ಏ.16,17ರಂದು `CET’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ.!

By kannadanewsnow5710/04/2025 6:24 AM

ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ಸೂಕ್ಷ್ಮವಾಗಿ, ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಏಪ್ರಿಲ್ 16ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಹಾಗೂ ಏಪ್ರಿಲ್ 17ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆ ಮೊದಲು ಹಾಗೂ ಪರೀಕ್ಷಾ ನಂತರ 30 ನಿಮಿಷಗಳು ಪೊಲೀಸ್ ಬಂದೋಬಸ್ತಿನ ಅವಶ್ಯಕತೆ ಇರುತ್ತದೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡ್ಯೊಯುವ ಮತ್ತು ವಿತರಣೆ ಮಾಡುವ ಸಮಯಕ್ಕೆ ಪ್ರತಿ ತಾಲ್ಲೂಕಿನ ಮಾರ್ಗಾಧಿಕಾರಿಗಳ ಜೊತೆಗೆ ಪೊಲೀಸ್ ರಕ್ಷಣೆ ಬೇಕಾಗಿರುತ್ತದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿಗಳಿಂದ ಘೋಷಿಸುವುದು.

ವಿಜ್ಞಾನ ವಿಷಯವನ್ನು ಬೋಧಿಸುವ ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಬಂಧಿಕರ, ಸ್ವಂತ ಮಕ್ಕಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದರೆ ಅಂತಹ ಉಪನ್ಯಾಸಕರು, ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತೆ ಇಲ್ಲ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನುಗಳನ್ನು ತರುವುದು ಹಾಗೂ ಕೈ ಗಡಿಯಾರವನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯವರು ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ಫೋನುಗಳನ್ನು ತರುವುದುನ್ನು ಹಾಗೂ ಕೈ ಗಡಿಯಾರ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಮುಖ್ಯ ಅಧೀಕ್ಷಕರು ಬೇಸಿಕ್ ಸೆಟ್ ಉಪಯೋಗಿಸಲು ಅವಕಾಶ ನೀಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿಟಿವಿ ವೀಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಬೇಕು ಎಂದು ಸೂಚನೆ ನೀಡಲಾಗಿದೆ.

BIG NEWS: `CET' exam on April 16th and 17th: Candidates are required to follow these rules!
Share. Facebook Twitter LinkedIn WhatsApp Email

Related Posts

ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ, ಡಿಕೆ ಶಿವಕುಮಾರ್ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ

03/03/2026 1:53 PM3 Mins Read

BIG NEWS : ಬೆಂಗಳೂರಲ್ಲಿ ಇವಿ ಬೈಕ್ ಮಾಲೀಕನಿಂದ 35 ಕೋಟಿಗೂ ಹೆಚ್ಚು ವಂಚನೆ : ಗ್ರಾಹಕರಿಂದ ಪ್ರತಿಭಟನೆ!

03/03/2026 1:30 PM1 Min Read

BREAKING : ‘KPCC’ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನೆಲೆ : ಮಾ10 ರಂದು ಡಿಸಿಎಂ ಡಿಕೆಯಿಂದ ಡಿನ್ನರ್ ಪಾರ್ಟಿ ಆಯೋಜನೆ

03/03/2026 1:24 PM1 Min Read
Recent News

ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ, ಡಿಕೆ ಶಿವಕುಮಾರ್ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ

03/03/2026 1:53 PM

ಮಗುವಿನ ಖಾಸಗಿ ಭಾಗಕ್ಕೆ ಹಾನಿ ಮಾಡುವುದು ಕೂಡ ಅತ್ಯಾಚಾರ : ಕೇರಳ ಹೈಕೋರ್ಟ್ ಐತಿಹಾಸಿಕ ತೀರ್ಪು

03/03/2026 1:42 PM

ಸಾಲದ `EMI’ ಪಾವತಿ ತಪ್ಪಿದ್ದಲ್ಲಿ ನಿಮಗಾಗುವ ನಷ್ಟಗಳೇನು? ಇಲ್ಲಿವೆ ಮುಖ್ಯ ಮಾಹಿತಿ

03/03/2026 1:34 PM

BIG NEWS : ಬೆಂಗಳೂರಲ್ಲಿ ಇವಿ ಬೈಕ್ ಮಾಲೀಕನಿಂದ 35 ಕೋಟಿಗೂ ಹೆಚ್ಚು ವಂಚನೆ : ಗ್ರಾಹಕರಿಂದ ಪ್ರತಿಭಟನೆ!

03/03/2026 1:30 PM
State News
KARNATAKA

ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ, ಡಿಕೆ ಶಿವಕುಮಾರ್ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ

By kannadanewsnow0503/03/2026 1:53 PM KARNATAKA 3 Mins Read

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್…

BIG NEWS : ಬೆಂಗಳೂರಲ್ಲಿ ಇವಿ ಬೈಕ್ ಮಾಲೀಕನಿಂದ 35 ಕೋಟಿಗೂ ಹೆಚ್ಚು ವಂಚನೆ : ಗ್ರಾಹಕರಿಂದ ಪ್ರತಿಭಟನೆ!

03/03/2026 1:30 PM

BREAKING : ‘KPCC’ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನೆಲೆ : ಮಾ10 ರಂದು ಡಿಸಿಎಂ ಡಿಕೆಯಿಂದ ಡಿನ್ನರ್ ಪಾರ್ಟಿ ಆಯೋಜನೆ

03/03/2026 1:24 PM

ಬೆಂಗಳೂರಲ್ಲಿ ದಾರುಣ ಘಟನೆ: ಕೇವಲ 3 EMI ಬಾಕಿ ಉಳಿಸಿಕೊಂಡಿದ್ದಕ್ಕೆ 1.2 ಕೋಟಿ ಮೌಲ್ಯದ ಫ್ಲಾಟ್ ಹರಾಜು!

03/03/2026 1:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.