Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುಣೆಯಲ್ಲಿ ಇಂದು ಕಾಕ್ರೋಚ್ ಜನತಾ ಪಾರ್ಟಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ !

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬೆಳ್ಳಿ ಆಮದು ನಿಯಮಗಳನ್ನು ಕಠಿಣಗೊಳಿಸಿದ ಕೇಂದ್ರ ಸರ್ಕಾರ: ಇನ್ಮುಂದೆ `DGFT’ ಪರವಾನಗಿ ಕಡ್ಡಾಯ
INDIA

BIG NEWS : ಬೆಳ್ಳಿ ಆಮದು ನಿಯಮಗಳನ್ನು ಕಠಿಣಗೊಳಿಸಿದ ಕೇಂದ್ರ ಸರ್ಕಾರ: ಇನ್ಮುಂದೆ `DGFT’ ಪರವಾನಗಿ ಕಡ್ಡಾಯ

By kannadanewsnow57

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಬೆಳ್ಳಿ ಆಮದಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ನಿಗದಿಪಡಿಸಿದ ಕೆಲವು ವಿಭಾಗಗಳ ಬೆಳ್ಳಿ ಆಮದು ನಿಯಮಗಳನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಮತ್ತಷ್ಟು ಕಠಿಣಗೊಳಿಸಿದೆ. ಇನ್ಮುಂದೆ ಯಾವುದೇ ಅಧಿಕೃತ ಏಜೆನ್ಸಿಗಳು ಅಥವಾ ಚಾನೆಲ್‌ಗಳ ಮೂಲಕ ಬೆಳ್ಳಿಯನ್ನು ಆಮದು ಮಾಡಿಕೊಳ್ಳಬೇಕಾದರೂ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (DGFT) ಮಾನ್ಯತೆ ಪಡೆದ ಆಮದು ಅಧಿಕಾರ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.

ವಾಣಿಜ್ಯ ಇಲಾಖೆಯ ಅಧೀನದಲ್ಲಿರುವ DGFT ಹೊರಡಿಸಿರುವ ಐಟಿಸಿ (ಎಚ್‌ಎಸ್) 2022ರ ಶೆಡ್ಯೂಲ್-1ರ ಚಾಪ್ಟರ್ 71 ರ ಅಡಿಯಲ್ಲಿ ಈ ಹೊಸ ತಿದ್ದುಪಡಿ ತರಲಾಗಿದೆ.ಶೇ. 99.9 ಅಥವಾ ಅದಕ್ಕಿಂತ ಹೆಚ್ಚು ಶುದ್ಧತೆ ಹೊಂದಿರುವ ಬೆಳ್ಳಿ ಕಣಗಳು (Silver grains) ಇನ್ನುಳಿದ ಕೆಲವು ಕಚ್ಚಾ ಬೆಳ್ಳಿ ಉತ್ಪನ್ನಗಳು (Unwrought silver products)ಈ ಎಲ್ಲಾ ಉತ್ಪನ್ನಗಳು ಸದ್ಯ ‘ನಿರ್ಬಂಧಿತ’ (Restricted) ಆಮದು ವರ್ಗದಡಿಯಲ್ಲೇ ಮುಂದುವರಿಯಲಿವೆ.

ಇದಕ್ಕೂ ಮುನ್ನ ಇದ್ದ ನಿಯಮಗಳ ಪ್ರಕಾರ, ಆರ್‌ಬಿಐ (RBI) ಸೂಚಿಸಿದ ಬ್ಯಾಂಕ್‌ಗಳು, ಡಿಜಿಎಫ್‌ಟಿ (DGFT) ಅಧೀನದ ಇತರೆ ಏಜೆನ್ಸಿಗಳು ಮತ್ತು ಐಎಫ್‌ಎಸ್‌ಸಿಎ (IFSCA) ಸೂಚಿಸಿದ ಜ್ಯುವೆಲ್ಲರ್ಸ್‌ಗಳು ಭಾರತೀಯ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್ (IIBX) ಮೂಲಕ ನೇರವಾಗಿ ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ಅವಕಾಶವಿತ್ತು. ಆದರೆ, ಹೊಸ ನಿಯಮದ ಪ್ರಕಾರ ಇನ್ಮುಂದೆ ಈ ಯಾವುದೇ ಚಾನೆಲ್ ಅಥವಾ ಏಜೆನ್ಸಿಗಳ ಮೂಲಕ ಆಮದು ಮಾಡಿಕೊಳ್ಳಬೇಕಾದರೂ, DGFT ಯಿಂದ ಪಡೆದ ಮಾನ್ಯತೆ ಇರಲೇಬೇಕು.

ಆದಾಗ್ಯೂ, ರಿಫೈನರಿಗಳು ‘ಅಕ್ಚುವಲ್ ಯೂಸರ್’ (AU) ಷರತ್ತಿನ ಅಡಿಯಲ್ಲಿ ಲೈಸೆನ್ಸ್ ಬಳಸಿ ಕಚ್ಚಾ ಬೆಳ್ಳಿ (Silver dore) ಆಮದು ಮಾಡಿಕೊಳ್ಳುವ ನಿಯಮದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ವಿದೇಶಿ ವಿನಿಮಯ ಗಳಿಕೆಯ (Forex Reserves) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅನಗತ್ಯ ಆಮದಿಗೆ ಕಡಿವಾಣ ಹಾಕಲು ಸರ್ಕಾರ ಕಳೆದ ತಿಂಗಳಷ್ಟೇ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 15 ಕ್ಕೆ ಏರಿಸಿತ್ತು.

ಕಳೆದ ಏಪ್ರಿಲ್ ತಿಂಗಳೊಂದರಲ್ಲೇ ಬೆಳ್ಳಿ ಆಮದು ವರ್ಷದಿಂದ ವರ್ಷಕ್ಕೆ ಶೇ. 157 ರಷ್ಟು ಜಿಗಿತ ಕಂಡು 411 ಮಿಲಿಯನ್ ಡಾಲರ್‌ ಗೆ ತಲುಪಿತ್ತು. ಇನ್ನು 2025-26ರ ಆರ್ಥಿಕ ವರ್ಷದಲ್ಲಿ ಬೆಳ್ಳಿ ಆಮದು ಶೇ. 150 ರಷ್ಟು ಹೆಚ್ಚಾಗಿ ಬರೋಬ್ಬರಿ 12 ಬಿಲಿಯನ್ ಡಾಲರ್‌ ಮುಟ್ಟಿತ್ತು.
ಭಾರತವು ಮುಖ್ಯವಾಗಿ ಯುಎಇ (UAE), ಬ್ರಿಟನ್ (UK) ಮತ್ತು ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ ಬೆಳ್ಳಿಯನ್ನು ಪ್ರಮುಖವಾಗಿ ಆಭರಣ ತಯಾರಿಕೆ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಸದ್ಯ ಹಠಾತ್ ಹೆಚ್ಚಾಗಿರುವ ಆಮದನ್ನು ನಿಯಂತ್ರಿಸಲು ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

BIG NEWS: Central government tightens silver import rules: DGFT license mandatory from now on
Share. Facebook Twitter LinkedIn WhatsApp Email

Related Posts

ಪುಣೆಯಲ್ಲಿ ಇಂದು ಕಾಕ್ರೋಚ್ ಜನತಾ ಪಾರ್ಟಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ !

1 Min Read

​ಓಮನ್ ಕರಾವಳಿಯಲ್ಲಿ ನೌಕೆಯ ಮೇಲೆ ದಾಳಿ: ಮೂವರು ಭಾರತೀಯರು ನಾಪತ್ತೆ, ರಕ್ಷಣಾ ಕಾರ್ಯಾಚರಣೆ ತೀವ್ರ

1 Min Read

​ಸೈಬರ್ ವಂಚನೆಗೊಳಗಾದವರಿಗೆ ಗುಡ್ ನ್ಯೂಸ್: ‘MRM’ ಪೋರ್ಟಲ್ ಮೂಲಕ ಹಣ ವಾಪಸ್ ಪಡೆಯುವುದು ಈಗ ಸುಲಭ!

2 Mins Read
Recent News

ಪುಣೆಯಲ್ಲಿ ಇಂದು ಕಾಕ್ರೋಚ್ ಜನತಾ ಪಾರ್ಟಿ ಅಭಿಯತ್ ದಿಪ್ಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ !

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

State News
KARNATAKA

ರಾಜ್ಯದ ಶಾಲಾ ಶಿಕ್ಷಕರಿಗೆ ಬಿಡುಗಡೆಯಾಯ್ತು ‘ಕರ್ತವ್ಯ’ ಆ್ಯಪ್‌ : ಇನ್ಮುಂದೆ ಮೊಬೈಲ್‌ ನಲ್ಲೇ `ಡಿಜಿಟಲ್ ಹಾಜರಾತಿ’ ಕಡ್ಡಾಯ!

By kannadanewsnow57 KARNATAKA 1 Min Read

ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ತನ್ನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ದೈನಂದಿನ ಹಾಜರಾತಿ ಪ್ರಕ್ರಿಯೆಯನ್ನು…

BIG NEWS : ಸರ್ಕಾರಿ ನೌಕರರಿಗೂ ಇದೆ ‘ಗೌಪ್ಯತೆಯ ಹಕ್ಕು’: ವೈಯಕ್ತಿಕ ಮಾಹಿತಿಗಾಗಿ `RTI’ ಬಳಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು

BIG NEWS : ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ‘ಇ-ಅಫೀಸ್’ ತಂತ್ರಾಂಶ ಬಳಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘DUPLICATE TC ’ ಪಡೆಯಲು ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.