ದಾವಣಗೆರೆ : ಶಾಸಕ ಯತ್ನಾಳ್ ಗೆ ನಾನು ನೋಟಿಸ್ ಕೊಟ್ಟಿಲ್ಲ. ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದೆ ಎಂದು ಸೂರಗೊಂಡನಕೊಪ್ಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ನೀಡಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಯತ್ನಾಳ್ ಉಚ್ಚಾಟನೆ ಕುರಿತು ನಾನು ಏನು ಹೇಳಲ್ಲ. ಎಲ್ಲರಿಗೂ ಮುಂದೆ ಒಳ್ಳೆಯದಾಗುತ್ತದೆ. ಶೀಘ್ರದಲ್ಲಿ ಎಲ್ಲಾ ಬಗೆಹರಿಯುತ್ತೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜೇಂದ್ರ ತಿಳಿಸಿದರು.
ಬಿಜೆಪಿ ಬಣ ಬಡಿದಾಟ ಬೀದಿಗೆ ಬಂದ ಹಿನ್ನೆಲೆಯಲ್ಲಿ ಇತ್ತೀಚಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿಯು 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ನೀಡಿತು ಆದರೆ ಶೋಕಾಶ್ ನೋಟಿಸ್ ಗಡವು ಅವಧಿ ಮುಕ್ತಾಯವಾಗಿದ್ದು, ಯತ್ನಾಳ್ ಯಾವುದೇ ಉತ್ತರ ನೀಡಿಲ್ಲ ಹಾಗಾಗಿ ಬಿಜೆಪಿ ಯತ್ನಾಳ್ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.