ಕಲಬುರ್ಗಿ : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಆದರೆ ಇದುವರೆಗೂ ಮೆರವಣಿಗೆಯಷ್ಟೇ ಜಾತಿಗಣತಿ ಸಮೀಕ್ಷೆ ನಡೆದಿದೆ. ಅಲ್ಲದೆ ತಾಂತ್ರಿಕ ಸಮಸ್ಯೆ ಹಾಗೂ ಸರ್ವ ಸಮಸ್ಯೆಯಿಂದ ಜಾತಿಗಣತಿ ಸಮೀಕ್ಷೆ ಮಾಡಲು ಶಿಕ್ಷಕರು ಪರದಾಟ ನಡೆಸುತ್ತಿದ್ದು, ಇದೀಗ ಜಾತಿಗಣತಿಯನ್ನು ಮುಂದೂಡಬೇಕು ಎಂದು ಶಿಕ್ಷಕರು ಅಕ್ರೋಶ ಹೊರಹಾಕಿದ್ದಾರೆ.
ಕಲ್ಬುರ್ಗಿಯಲ್ಲಿ ಜಾತಿಗಣತಿಯನ್ನು ತಕ್ಷಣವೇ ಮುಂದೊಡಬೇಕು ಎಂದು ನೂರಾರು ಶಿಕ್ಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಸಮೀಕ್ಷೆ ಬಿಟ್ಟು ತಾಲೂಕು ಕಚೇರಿಗೆ ಶಿಕ್ಷಕರು ಬಂದಿದ್ದಾರೆ ತಾಂತ್ರಿಕ ದೋಷದಿಂದ ಸರ್ವೆ ಆಗುತ್ತಿಲ್ಲ ದಿನಾಲು 80 ರಿಂದ 90 ಕಿಲೋಮೀಟರ್ ದೂರದಿಂದ ನಾವು ಬರುತ್ತೇವೆ ದಿನಪೂರ್ತಿ ಪಡೆದರು ಒಂದೇ ಒಂದು ಸರ್ವೇ ಆಗುತ್ತಿಲ್ಲ ಮೊಬೈಲ್ ಆಪ್ ನಲ್ಲಿ ಬಹಳಷ್ಟು ಸಮಸ್ಯೆಗಳು ಇವೆ. ಸಮೀಕ್ಷೆ ಮಾಡಲು ನಮಗೆ ಸೂಕ್ತ ತರಬೇಕು ಸಹ ನೀಡಿಲ್ಲ ಗಣತಿ ಮಾಡದಿದ್ದರೆ ಸಸ್ಪೆಂಡ್ ಮಾಡುವ ಬೆದರಿಕೆ ಹಾಕುತ್ತಾರೆ ಹೀಗಾದರೆ ನಾವು ಕೆಲಸ ಮಾಡೋದು ಹೇಗೆ ಅಂತ ಗರಂ ಆಗಿದ್ದಾರೆ.