ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸ್ ಹೆಸರು ಆರೋಪಿ ಮುತ್ತು ಅಭಿಮನ್ಯುವನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಗೀತಾ ಮತ್ತು ಆಕೆಯ ಪುತ್ರಿ ಜೊತೆಗೆ ಆರೋಪಿ ಮುತ್ತು ವಾಸವಿದ್ದ. ಪುತ್ರಿ ಮದುವೆ ಮಾಡಿ ಕೊಡುವಂತೆ ಗೀತಾಗೆ ಮುತ್ತು ಒತ್ತಾಯಿಸಿದ್ದಾನೆ. ಮದುವೆಗೆ ಒಪ್ಪದಿದ್ದಕ್ಕೆ ಗೀತಾ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಸವೇಶ್ವರನಗರದ ಭೋವಿ ಕಾಲೋನಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಸದ್ಯ ತಮಿಳುನಾಡಿನಲ್ಲಿ ಆರೋಪಿ ಮುತ್ತು ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








