ಚಾಮರಾಜನಗರ : ಕಳೆದ ಕೆಲವು ತಿಂಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳಿಗೆ ವಿಷ ಹಾಕಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಹಸುವಿನ ಮಾಲೀಕ ಚಂದು, ಸಿದ್ದರಾಜು, ಸಂಪು ಹಾಗೂ ಗಣೇಶ ಎಂಬವರು ಹುಲಿ ಕೊಂದ ಆರೋಪ ಹೊತ್ತಿದ್ದರು. ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಹಸುಗಳನ್ನು ಹುಲಿಗಳು ಕೊಂದಿವೆ ಎಂದು ಅದೇ ಸಿಟ್ಟಿನಲ್ಲಿ ಹಸುವಿನ ಮಾಲೀಕ ಮಾಂಸದಲ್ಲಿ ವಿಷ ಹಾಕಿದ್ದರು ಹಾಗಾಗಿ ಹುಲಿಗಳು ಮಾಂಸ ಸೇವಿಸಿ ಸಾವನ್ನಪ್ಪಿದ್ದವು.
ಪ್ರಕರಣ ಹಿನ್ನೆಲೆ ?
ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಪಚ್ಚೆದೊಡ್ಡಿ ಅರಣ್ ಪ್ರದೇಶದಲ್ಲಿ ಅ.2 ರಂದು ಹುಲಿಯೊಂದನ್ನು ಮೂರು ಭಾಗಗಳಾಗಿ ತುಂಡರಿಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ತಲೆಯಿಂದ ಭುಜದವರೆಗೆ ಒಂದು ಭಾಗ, ಭುಜದಿಂದ ಹೊಟ್ಟೆವರೆಗೆ ಮತ್ತೊಂದು ಭಾಗ ಹಾಗೂ ಅದರಿಂದ ಕೆಳಕ್ಕೆ ಇನ್ನೊಂದು ಭಾಗವಾಗಿ ಹುಲಿಯನ್ನು ತುಂಡರಿಸಲಾಗಿತ್ತು.
ವನ್ಯಜೀವಿ ಸಪ್ತಾಹದ ವೇಳೆಯೇ ಇಂತಹ ಕೃತ್ಯ ನಡೆದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮೂರು ತಿಂಗಳ ಅಂತರದಲ್ಲಿ ಇದೇ ವನ್ಯಧಾಮದಲ್ಲಿ ಸ್ಥಳೀಯರ ಸೇಡಿಗೆ 6 ಹುಲಿಗಳು ಬಲಿಯಾಗಿದ್ದವು.








